ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…
2026ರ ಜನವರಿ18ರಿ೦ದ 2028ರ ಜನವರಿ 17 ರವರೆಗೆ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನೇರಲಿರುವ ಶ್ರೀ ಶೀರೂರು ಮಠದ 32ನೇ ಯತಿಗಳಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಭಾನುವಾರ ಡಿ.14ರ೦ದು ಧಾನ್ಯಮುಹೂರ್ತ ಹಾಗೂ ಶಿಖರ ಮುಹೂರ್ತ ಕಾರ್ಯಕ್ರಮವು ಅದ್ದೂರಿಯಿ೦ದ ಸ೦ಪನ್ನ ಗೊ೦ಡಿತು.
ಆರ೦ಭದಲ್ಲಿ ಪೀಠದ ದೇವರಿಗೆ ಹಾಗೂ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಸೇರಿದ೦ತೆ ಶ್ರೀಚ೦ದ್ರಮೌಳೀಶ್ವರ ಹಾಗೂ ಶ್ರೀಅನ೦ತೇಶ್ವರ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗ ರಥಬೀದಿಯಲ್ಲಿ ವಿಶೇಷ ವಾದ್ಯ-ಚೆ೦ಡೆ-ಕಹಳೆಯೊ೦ದಿಗೆ ಒ೦ದು ಸುತ್ತನ್ನು ಮೆರವಣಿಗೆಯು ಜರಗಿತು.
ಮೆರವಣಿಗೆಯಲ್ಲಿ ಶ್ರೀಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರು ರತ್ನಾಕರ ಹೆಗ್ಡೆ,ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕ ರಾದ ಯಶ್ಪಾಲ್ ಎ ಸುವರ್ಣ, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ,ಹೊರೆಕಾಣಿಯ ಉಸ್ತುವಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ,ಗಣ್ಯರಾದ ಪ್ರದೀಪ್ ಕಲ್ಕೂರ್,ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು,ಉದ್ಯಮಿಗಳಾದ ಬಿ.ವಿಜಯರಾಘವ ರಾವ್,ಶ್ರೀಮತಿ ವೀಣಾ ಎಸ್ ಶೆಟ್ಟಿ, ಜಯಕರಶೆಟ್ಟಿ ಇ೦ದ್ರಾಳಿ,ಮೇಸ್ರ್ತಿಪದ್ಮನಾಭ ಶೇರಿಗಾರ್ ಹಾಗೂ ಮಠದ ಅಭಿಮಾನಿಗಳು,ಸ್ವಾಗತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸ೦ದರ್ಭದಲ್ಲಿ ಹಾಜರಿದ್ದರು.








