ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಕೇರಳ ನಟಿ ಮೇಲೆ ಅತ್ಯಾಚಾರ, ಹಲ್ಲೆ ಪ್ರಕರಣ: ಪಲ್ಸರ್ ಸುನಿ ಸೇರಿ ಎಲ್ಲಾ ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ಕೊಚ್ಚಿ: ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ, ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಶಿಕ್ಷೆ ಪ್ರಕಟಿಸಿದ್ದಾರೆ. ಲೈಂಗಿಕ ಕೃತ್ಯಕ್ಕೆ ಸುಫಾರಿ ನೀಡಿದ್ದಕ್ಕಾಗಿ ದೇಶದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣ ಇದಾಗಿದೆ. ಎಲ್ಲಾ ಆರು ಆರೋಪಿಗಳಿಗೆ ತಲಾ 50,000 ರೂ. ದಂಡ ವಿಧಿಸಲಾಗಿದೆ.

ಒಂದರಿಂದ ಆರು ಆರೋಪಿಗಳಾದ ಪಲ್ಸರ್ ಸುನಿ ಅಲಿಯಾಸ್ ಎನ್.ಎಸ್. ಸುನಿಲ್, ಮಾರ್ಟಿನ್ ಆಂಟೋನಿ, ಬಿ. ಮಣಿಕಂದನ್, ವಿ.ಪಿ. ವಿಜಯೇಶ್, ಎಚ್. ಸಲೀಂ (ವಡಿವಾಲ್ ಸಲೀಂ) ಮತ್ತು ಪ್ರದೀಪ್ ನನ್ನು ಸೋಮವಾರ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತ್ತು. ಈಗ ಅವರೆಲ್ಲರಿಗೂ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

2017ರ ಫೆಬ್ರವರಿ 17ರ ರಾತ್ರಿ ನಟಿಯನ್ನು ಅಂಗಮಾಲಿ ಅಥಣಿ ಬಳಿ ಕಾರು ತಡೆದು ಅಪಹರಿಸಿ, ದೈಹಿಕವಾಗಿ ಹಲ್ಲೆ ಮಾಡಿ, ಅಶ್ಲೀಲವಾಗಿ ಫೋಟೋಗಳನ್ನು ಸೆರೆಹಿಡಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಪಿತೂರಿ ಮತ್ತು ಸಾಕ್ಷ್ಯ ನಾಶವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಎಂಟನೇ ಆರೋಪಿ ದಿಲೀಪ್‌ನನ್ನು ಖುಲಾಸೆಗೊಳಿಸಿತ್ತು. ಏಳನೇ ಆರೋಪಿ ಚಾರ್ಲಿ ಥಾಮಸ್, ಒಂಬತ್ತನೇ ಆರೋಪಿ ಸನಿಲ್ ಕುಮಾರ್ (ಮೇಷ್ಠಿರಿ ಸನಿಲ್), ಮತ್ತು 15 ನೇ ಆರೋಪಿ ಮತ್ತು ದಿಲೀಪ್ ಸ್ನೇಹಿತ ಜಿ ಶರತ್ ಅವರನ್ನು ಸಹ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು. ಬೈಜು ಪೌಲೋಸ್ ತನಿಖಾ ಅಧಿಕಾರಿಯಾಗಿದ್ದು ಅಡ್ವ. ವಿ ಅಜ್‌ಕುಮಾರ್ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದಾರೆ.

No Comments

Leave A Comment