ಶೀರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭರದ ಸಿದ್ದತೆ…ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಡಾಲರ್ ಬೆಲೆ 90ಕ್ಕೂ ಅಧಿಕ ದಾಟಿದೆ-ಆದರೆ ಮೋದಿಯವರು ಇನ್ನೂ ಕೂಡ ತಮ್ಮ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಡಲಿಲ್ಲ?- ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ

ಈ ಹಿಂದೆ ನಮ್ಮ ಕಾಂಗ್ರೆಸ್ ಪಕ್ಷದ ಆಡಳಿತ ಇರುವಾಗ ನಮ್ಮ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಅವರನ್ನು ಹೀನಾಯವಾಗಿ ಅವರ ಬಗ್ಗೆ ಮಾತನಾಡಿ ತಾನು ಡಾಲರ್ ಬೆಲೆಯನ್ನು ಮೂವತ್ತಕ್ಕೆ ಇಳಿಸುತ್ತೇನೆ ಎಂದು ಬುರುಡೆ ಬಿಟ್ಟು ಅಧಿಕಾರ ಪಡೆದುಕೊಂಡು ಇದೀಗ ಅಧಿಕಾರದ ಕುರ್ಚಿಯಲ್ಲಿ ಅಂಟಿಕೊಂಡು ಇರುವ ಮಾನ್ಯ ನರೇಂದ್ರ ಮೋದಿಯವರು ಸಹಿತ ಎಲ್ಲಾ ಬಿಜೆಪಿ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಿ ? ನಮ್ಮ ದೇಶದ ಜನರನ್ನು ಮೋಸಗೊಳಿಸುವ ಕಾರ್ಯಕ್ರಮ ದಯವಿಟ್ಟು ಮುಗಿಸಿ. ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಮ್ಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಡಾಲರ್ ನ ಬೆಲೆ 90 ದಾಟಿದ್ದು. ಇದು ದೇಶದ ಜನರಲ್ಲಿ ಮರೆಮಾಚಿಸಲು .ಇಂಡಿಗೋ ವಿಮಾನದ ಯಾನವನ್ನು ಕಡಿತಗೊಳಿಸಿ ವಿಮಾನ ನಿಲ್ದಾಣದಲ್ಲಿ ಜನರು ಉಳಿದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸುವಂತೆ ಮಾಡಿ .ನಮ್ಮ ದೇಶದ ಜನರನ್ನು ಮೋಸಗೊಳಿಸುವ ಪ್ರಯತ್ನವನ್ನು ಕೇಂದ್ರದ ಮೋದಿ ಸರಕಾರ ಮಾಡುತ್ತಿದ್ದು ಇದು ನಮ್ಮ ಭಾರತ ದೇಶದ ಒಂದು ದುರದೃಷ್ಟವೆಂದೆ ಹೇಳಬಹುದು. ಮತ ಕಳ್ಳತನ ಮಾಡಿಸಿ ಆಡಳಿತ ಮಾಡುತ್ತಿರುವ ಈ ಬಿಜೆಪಿ ನಾಯಕರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದೆ ಕೇವಲ ತಮ್ಮ ಸ್ವಂತಕ್ಕಾಗಿ ಆಡಳಿತ ನಡೆಸುತ್ತಿರುವುದು ನಮ್ಮ ದೇಶದ ಜನರ ದೌರ್ಭಾಗ್ಯ.

ಇಂಡಿಗೋ ಕಂಪನಿಯು ಬಿಜೆಪಿ ಪಕ್ಷಕ್ಕೆ ಕೊಟ್ಟ ದೇಣಿಗೆ ಎಷ್ಟು ಎಂಬುದನ್ನು ಮೊದಲು ಬಿಜೆಪಿ ನಾಯಕರು ಬಹಿರಂಗಪಡಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ವಿನ೦ತಿಸಿದ್ದಾರೆ.

No Comments

Leave A Comment