ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ:ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155’ ಅನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಶುಕ್ರವಾರ ಉಡುಪಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಕಲ್ಸಂಕ-ಗುಂಡಿಬೈಲು ರಸ್ತೆಯ ಸುರಭಿ ಆರ್ಕೇಡ್ ನಲ್ಲಿರುವ ಯಮಹ ಅಧಿಕೃತ ಡೀಲರ್ ಉಡುಪಿ ಮೋಟಾರ್ಸ್ ನಲ್ಲಿ ನಡೆದ ಸಮಾರಂಭದಲ್ಲಿ XSR 155 ಹಾಗೂ FZ ರೇವ್ ಬೈಕುಗಳನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ಯಮಹಾ ಕಂಪೆನಿಯ ಬೈಕುಗಳು ಆಧುನಿಕ ತಂತ್ರಜ್ಞಾನ ಹಾಗೂ ಅತ್ಯುತ್ತಮ ಮಾರಾಟೋತ್ತರ ಸೇವೆಯೊಂದಿಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಚೀಫ್ ಮ್ಯಾನೇಜರ್ ವಿನೋದ್ ಕುಮಾರ್ ಮಾತನಾಡಿ ಗ್ರಾಹಕ ಸೇವೆಗೆ ಹೆಸರಾಗಿರುವ ಉಡುಪಿ ಮೋಟರ್ಸ್ ನೊಂದಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇನ್ನೋರ್ವ ಮುಖ್ಯ ಅತಿಥಿ ಶಟರ್ ಬಾಕ್ಸ್ ಫಿಲ್ಮ್ಸ್ ನ ಯೂಟ್ಯೂಬರ್ ಸಚಿನ್ ಶೆಟ್ಟಿ ಮಾತನಾಡಿ ಒಫ್ ರೋಡ್ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಯಮಹಾ ಕಂಪೆನಿಯು ಇನ್ನಷ್ಟು ಪವರ್ ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅವಕಾಶವಿದೆ ಎಂದರು.
ಅತಿಥಿಗಳು ಜೊತೆಯಾಗಿ ಪ್ರಥಮ ಗ್ರಾಹಕರಾದ ಗೌರವ್ ಅವರಿಗೆ ಹೊಸ XSR 155 ಬೈಕಿನ ಕೀಯನ್ನು ಹಸ್ತಾ೦ತರಿಸಿದರು.
ಯಮಹಾ ಕಂಪೆನಿಯ ಏರಿಯಾ ಸೇಲ್ಸ್ ಇಂಜಿನಿಯರ್ ಶ್ರೀರಾಗ್ ಹೊಸ ಬೈಕುಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು.
ಈಗಾಗಲೇ 50ಕ್ಕೂ ಹೆಚ್ಚಿನ XSR 155 ಬೈಕುಗಳ ಬುಕ್ಕಿಂಗ್ ಆಗಿದ್ದು, ಅವುಗಳನ್ನು ಗ್ರಾಹಕರಿಗೆ ವಿತರಿಸುವ ಕಾರ್ಯ ತಕ್ಷಣದಿಂದಲೇ ಆರಂಭಿಸಿರುವುದಾಗಿ ಉಡುಪಿ ಮೋಟರ್ಸ್ ಪಾಲುದಾರರಾದ ಟೈಟಸ್ ಸುವಾರೀಸ್ ತಿಳಿಸಿದರು. ಪಾಲುದಾರರಾದ ಟೆರೆನ್ಸ್ ಸುವಾರೀಸ್ ಸ್ವಾಗತಿಸಿ, ಇನ್ನೋರ್ವ ಪಾಲುದಾರ ಜಯಪ್ರಕಾಶ್ ಭಂಡಾರಿ ವಂದಿಸಿದರು.
ಯತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉಡುಪಿ ಮೋಟರ್ಸ್ ನ ಯಶಸ್ವೀ ಸಬ್ ಡೀಲರ್ ಗಳನ್ನು ಗುರುತಿಸಿ ಗೌರವಿಸಲಾಯಿತು.