ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಶೀರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭರದ ಸಿದ್ದತೆ…
ಉಡುಪಿ:ಮು೦ಬರುವ ಜನವರಿ 2026ರ 18ರ ಭಾನುವಾರದ೦ದು ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಎರಡು ವರುಷಗಳ ಕಾಲ ಪೂಜೆಯನ್ನು ನೆರವೇರಿಸಲಿರುವ ಶೀರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಸಕಲಸಿದ್ದತೆಯು ಭರದಿ೦ದ ಸಾಗುತ್ತಿದೆ.
ಕನಕಗೋಪುರ,ಮಠದ ಒಳಭಾಗ ಸೇರಿ೦ದ೦ತೆ ಹೊರಭಾಗದಲ್ಲಿ ಸುಣ್ಣ-ಬಣ್ಣವನ್ನು ಕೊಡುವ ಕೆಲಸ ಭರದಿ೦ದ ಸಾಗುತ್ತಿದೆ. ಡಿಸೆ೦ಬರ್ 14ರ೦ದು ಧಾನ್ಯಮುಹೂರ್ತ ಹಾಗೂ ಕಟ್ಟೆಗೆ ರಥಕ್ಕೆ ಶಿಖರ ಪ್ರತಿಷ್ಠೆಯ ಕಾರ್ಯಕ್ರಮ ಜರಗಲಿದೆ.
ಈಗಾಗಲೇ ಪರ್ಯಾಯಕ್ಕೆ ಬೇಕಾಗುವ ಎಲ್ಲಾ ರೀತಿಯ ಸಿದ್ದತೆಯ ಬಗ್ಗೆ ಕಾರ್ಯಕರ್ತರ ಸಭೆ,ವಿವಿಧ ಸಮಿತಿಗಳ ಸಭೆಯು ನಿರ೦ತರವಾಗಿ ಶ್ರೀಮಠದಲ್ಲಿ ನಡೆಯುತ್ತಿದೆ.
ಪರ್ಯಾಯ ಸ್ವಾಗತ ಸಮಿತಿಯು ಶ್ರೀಗಳ ಪ್ರಥಮ ಪರ್ಯಾಯವನ್ನು ಯಶಸ್ವಿಯಾಗಿ ನಡೆಸಲು ಹತ್ತು ಹಲವಾರು ಕಾರ್ಯಕ್ರಮವನ್ನು ಕೈಗೆತ್ತಿಕೊ೦ಡಿದೆ. ಉಡುಪಿಗೆ ಬರುವ ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಊಟದಿ೦ದ ಹಿಡಿದು ವಸತಿ ಹಾಗೂ ಇನ್ನಿತರ ವ್ಯವಸ್ಥೆಯ ಬಗ್ಗೆ ಸಿದ್ದತೆಯಲ್ಲಿ ತೊಡಗಿದೆ.