ಶೀರೂರು ಮಠದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭರದ ಸಿದ್ದತೆ…ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
IND vs SA: ಭಾರತದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್; ದಿಗ್ಗಜರ ದಾಖಲೆ ಉಡೀಸ್
ಟೀಂ ಇಂಡಿಯಾ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಇದೀಗ ಮೂರನೇ ಏಕದಿನದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ, ಡಿ ಕಾಕ್ ಕೇವಲ 80 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡಿತು. ಆದರೆ ಕ್ವಿಂಟನ್ ಡಿ ಕಾಕ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸಿ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 23 ನೇ ಶತಕವನ್ನು ಪೂರೈಸಿದರು. ಇದರೊಂದಿಗೆ, ಅವರು ಸೌರವ್ ಗಂಗೂಲಿ ಸೇರಿದಂತೆ ಮೂವರು ಲೆಜೆಂಡರಿ ಆಟಗಾರರನ್ನು ಹಿಂದಿಕ್ಕಿದರು.
ಸುಮಾರು ಎರಡು ವರ್ಷಗಳ ಕಾಲ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಕ್ವಿಂಟನ್ ಡಿ ಕಾಕ್ ನವೆಂಬರ್‌ನಲ್ಲಿ ನಿವೃತ್ತಿಯಿಂದ ಹಿಂತಿರುಗಿ ಪಾಕಿಸ್ತಾನ ವಿರುದ್ಧದ ಸತತ ಮೂರು ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆದಾಗ್ಯೂ, ಭಾರತದ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿತ್ತು. ಮೊದಲೆರಡು ಪಂದ್ಯಗಳಲ್ಲಿ ಕೇವಲ ಎಂಟು ರನ್ ಗಳಿಸಿದ್ದ ಡಿ ಕಾಕ್, ಸರಣಿಯ ಕೊನೆಯ ಪಂದ್ಯದಲ್ಲಿ ತಮ್ಮ ಹಳೆಯ ಶೈಲಿಯನ್ನು ಪ್ರದರ್ಶಿಸಿ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
23 ನೇ ಏಕದಿನ ಶತಕ
ವಾಸ್ತವವಾಗಿ ಈ ಪಂದ್ಯದ ಐದನೇ ಎಸೆತದಲ್ಲಿ ರಯಾನ್ ರಿಕಲ್ಟನ್ ವಿಕೆಟ್ ಪತನವಾಯಿತು. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಮೂರು ಅಥವಾ ನಾಲ್ಕು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಆದರೆ ಎಡಗೈ ಬ್ಯಾಟ್ಸ್‌ಮನ್ ಡಿ ಕಾಕ್ ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿದ ತಕ್ಷಣ, ತಂಡದ ಸ್ಕೋರ್ ಬೋರ್ಡ್ ಓಡಲಾರಂಭಿಸಿತು. ಅಲ್ಲದೆ ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡಿ ಕಾಕ್, ಅದರ ನಂತರ ಇನ್ನಷ್ಟು ಆಕ್ರಮಣಕಾರಿಯಾಗಿ ಮುಂದಿನ 50 ರನ್ ಗಳಿಸಲು ಕೇವಲ 38 ಎಸೆತಗಳನ್ನು ತೆಗೆದುಕೊಂಡರು. ಅಂತಿಮವಾಗಿ 30 ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮ್ಮ 23 ನೇ ಏಕದಿನ ಶತಕವನ್ನು ಪೂರೈಸಿದರು.
ವಿಲಿಯರ್ಸ್ ದಾಖಲೆ ಉಡೀಸ್
ಇದರೊಂದಿಗೆ, ಡಿ ಕಾಕ್ 1413 ದಿನಗಳ ದೀರ್ಘ ಅಂತರದ ನಂತರ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅವರು ಈ ಹಿಂದೆ ಜನವರಿ 23, 2022 ರಂದು ಭಾರತದ ವಿರುದ್ಧ ಶತಕ ಬಾರಿಸಿದ್ದರು. ಇದು ಭಾರತದ ವಿರುದ್ಧ ಡಿ ಕಾಕ್ ಅವರ ಏಳನೇ ಶತಕವಾಗಿದ್ದು, ಈ ಮೂಲಕ ತಂಡದ ಮಾಜಿ ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಡಿ ವಿಲಿಯರ್ಸ್ ಮತ್ತು ಡಿ ಕಾಕ್ ದಕ್ಷಿಣ ಆಫ್ರಿಕಾ ಪರ ಭಾರತ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದರು. ಇಬ್ಬರು ತಲಾ ಆರು ಶತಕಗಳನ್ನು ಗಳಿಸಿದ್ದರು. ಆದಾಗ್ಯೂ, ಡಿ ಕಾಕ್ ಈಗ ಈ ದಾಖಲೆಯನ್ನು ಮೀರಿಸಿದ್ದಾರೆ. ಮಾತ್ರವಲ್ಲದೆ ಡಿ ಕಾಕ್, ಶ್ರೀಲಂಕಾದ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ ಅವರು ಭಾರತದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
10ನೇ ಸ್ಥಾನಕ್ಕೇರಿದ ಡಿ ಕಾಕ್
ತಮ್ಮ 23 ನೇ ಶತಕದೊಂದಿಗೆ ಡಿ ಕಾಕ್, ಈಗ ಅತಿ ಹೆಚ್ಚು ಏಕದಿನ ಶತಕಗಳ ಪಟ್ಟಿಯಲ್ಲಿ 10 ನೇ ಸ್ಥಾನ ತಲುಪಿದ್ದಾರೆ. ವಿಶಾಖಪಟ್ಟಣದಲ್ಲಿ ಬಾರಿಸಿದ ಶತಕದೊಂದಿಗೆ ಡಿ ಕಾಕ್, ಸೌರವ್ ಗಂಗೂಲಿ, ಡೇವಿಡ್ ವಾರ್ನರ್ ಮತ್ತು ತಿಲಕರತ್ನೆ ದಿಲ್ಶನ್ರನ್ನು ಮೀರಿಸಿದ್ದಾರೆ. ಇಲ್ಲಿಯವರೆಗೆ, ಈ ಮೂವರಂತೆ ಡಿ ಕಾಕ್ ಕೂಡ 22 ಶತಕಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದರು. ಇದೀಗ ಕೇವಲ 161 ನೇ ಇನ್ನಿಂಗ್ಸ್‌ನಲ್ಲಿ 23ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ್ದಾರೆ. ಇನ್ನು ಈ ಇನ್ನಿಂಗ್ಸ್‌ನಲ್ಲಿ 89 ಎಸೆತಗಳನ್ನು ಎದುರಿಸಿದ ಡಿ ಕಾಕ್ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 106 ರನ್ ಗಳಿಸಿ ಔಟಾದರು.