ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...

ಅನೈತಿಕ ಸಂಬಂಧ: ಇಸ್ಲಾಮ್ ಗೆ ಮತಾಂತರವಾಗಲು ವ್ಯಕ್ತಿಯ ಚಿತ್ರ ಹಿಂಸೆ; ವಿವಾಹಿತ ಮಹಿಳೆ ಆತ್ಮಹತ್ಯೆ!

ಬೆಳಗಾವಿ: ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇಸ್ಲಾಮ್ ಗೆ ಮತಾಂತರವಾಗುವಂತೆ ಹಿಂಸಿಸುತ್ತಿದ್ದದ್ದನ್ನು ತಡೆಯಲಾರದೇ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ರಾಮದುರ್ಗದಲ್ಲಿ ವರದಿಯಾಗಿದೆ.

ಮಕ್ತುಮಸಾಬ್ ಪಾಟೀಲ್​ ಎಂಬಾತನ ಈ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿಯನ್ನು ನಾಗವ್ವ ವಂಟಮೂರಿ(28) ಎಂದು ಗುರುತಿಸಲಾಗಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಮಕ್ತುಮಸಾಬ್ ಪಾಟೀಲ್ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.

9 ವರ್ಷಗಳ ಹಿಂದೆ ದೇಮಪ್ಪ-ನಾಗವ್ವ ಮದುವೆಯಾಗಿದ್ದರು. ಮದುವೆಯಾದ 1 ವರ್ಷಕ್ಕೆ ನಾಗವ್ವಗೆ ಮಕ್ತುಮ್​ಸಾಬ್ ಪರಿಚಯವಾಗಿದ್ದ. ಪರಿಚಯ ಅನೈತಿಕ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ನಾಗವ್ವನ ಮನೆಯಲ್ಲಿ ಗೊತ್ತಾಗಿ ಮಕ್ತುಮ್​ಸಾಬ್ ಪಾಟೀಲ್ ಸಂಪರ್ಕ ತ್ಯಜಿಸುವಂತೆ ಬುದ್ಧಿವಾದ ಹೇಳಿದ್ದರು. ​

ಮನೆಯವರ ಸೂಚನೆ ಮೇರೆಗೆ ನಾಗವ್ವ ಆತನ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಕ್ತುಮಸಾಬ್ ಪಾಟೀಲ್ ಧಮ್ಕಿ ಹಾಕುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ. ಮತಾಂತರ ಆಗದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ನಾಗವ್ವ ಕುಟುಂಬದವರು ಆರೋಪಿಸಿದ್ದಾರೆ.

No Comments

Leave A Comment