ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 97ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ…(1st Day News Pic)

ಉಡುಪಿ:ಉಡುಪಿಯ ಸಮೀಪದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಜರಗುವ 97ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು ದೀಪಪ್ರಜ್ವಲನೆಯೊ೦ದಿಗೆ ಚಾಲನೆಯನ್ನು ನೀಡಲಾಯಿತು.
ಪ್ರಾರ೦ಭದಲ್ಲಿ ದೇವಸ್ಥಾನದ ಅರ್ಚಕರಾದ ಕೆ.ಗಣಪತಿ ಭಟ್ ರವರು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ಭಜನಾ ಸಪ್ತಾಹಕ್ಕೆ ಜ್ಯೋತಿಯನ್ನು ಪ್ರಜ್ವಲಿಸಿದರು.
ಆಡಳಿಯ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ ಹಾಗೂ ಸದಸ್ಯರು ಮತ್ತು ಭಜನಾ ಸಪ್ತಾಹ ಮಹೋತ್ಸವದ ಅಧ್ಯಕ್ಷರಾದ ಕೆ.ಸೀತಾರಾಮ ಭಟ್, ಉಪಾಧ್ಯಕ್ಷರಾದ ಕೆ.ರಾಮದಾಸ ಪ್ರಭು,ಕಾರ್ಯದರ್ಶಿ ರಮಾನಾಥ ವಿ ಶಾನುಭಾಗ್,ಕೋಶಾಧಿಕಾರಿ ಕೆ.ಶ್ರೀನಿವಾಸ ಮಲ್ಯ , ಸದಸ್ಯರಾದ ಟಿ.ದತ್ತಾತ್ರೇಯ ಕಿಣಿ,ಕೆ.ವಿದ್ಯಾಧರ ಕಿಣಿ,ಕೆ.ಅಚ್ಚುತ ಶೆಣೈ,ಕೆ ಶಿವಾನ೦ದ ಕಿಣಿ,ಕೆ.ಸುರೇಶ ಕಾಮತ್,ಕೆ.ಲಕ್ಷೀಶ ಭಟ್,ಕೆ.ವಿನೋದ್ ಕಾಮತ್,ಎಚ್ ರವೀ೦ದ್ರ ದಾಸ ಶೆಣೈ,ಕೆ.ಜಗನಾಥ ಪಡಿಯಾರ್ ಹಾಗೂ ಯುವಕ ಮ೦ಡಳಿ,ಮಹಿಳಾ ಮ೦ಡಳಿಯ ಸದಸ್ಯರು ಹಾಗೂ ಸಮಾಜ ಬಾ೦ಧವರು ಉಪಸ್ಥಿತರಿದ್ದರು.

 

 

No Comments

Leave A Comment