ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಗುಂಡಿನ ಶಬ್ಧಕ್ಕೆ ಹೆದರಿ ಓಡಿದ ಜನ; ಕಾಂಗೋದ ಗಣಿ ಸೇತುವೆ ಕುಸಿದು 32 ಜನ ಮೃತ್ಯು
ಕಾಂಗೋ:ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ತಾಮ್ರದ ಗಣಿ ಬಳಿ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರತಿದಿನ ನೂರಾರು ಗಣಿಗಾರರು ಕೆಲಸ ಮಾಡುವ ಲುವಾಲಾಬಾ ಪ್ರಾಂತ್ಯದ ಕಲಾಂಡೋ ಗಣಿಗಾರಿಕೆ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಆ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಹೆದರಿ, ಜನರು ಸ್ಥಳದಿಂದ ಹೊರಬರಲು ಸಾಮಾನ್ಯವಾಗಿ ಬಳಸಲಾಗುವ ಕಿರಿದಾದ ಸೇತುವೆಯತ್ತ ಧಾವಿಸಿದರು. ಓಡಿಹೋಗುತ್ತಿದ್ದ ಜನಸಮೂಹದ ಹಠಾತ್ ಒತ್ತಡದಿಂದ ಸೇತುವೆ ಕುಸಿದುಬಿದ್ದಿತ್ತು. 20 ಕ್ಕೂ ಹೆಚ್ಚು ಗಣಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.