ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಗುಜರಾತ್‌: ಆಂಬ್ಯುಲೆನ್ಸ್‌ಗೆ ಬೆಂಕಿ, ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಾವು

ಮೋಡಸಾ: ಗುಜರಾತ್‌ನ ಅರ್ವಳ್ಳಿ ಜಿಲ್ಲೆಯ ಮೋಡಸಾ ಪಟ್ಟಣದ ಬಳಿ ಇಂದು ಮಂಗಳವಾರ ಬೆಳಗಿನ ಜಾವ ನವಜಾತ ಶಿಶು, ವೈದ್ಯರು ಮತ್ತು ಹಾಗೂ ಮತ್ತಿಬ್ಬರು ಪ್ರಯಾಣಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಸಜೀವ ದಹನಗೊಂಡಿದ್ದಾರೆ.

ಹೆರಿಗೆಯ ನಂತರ ಅಸ್ವಸ್ಥವಾಗಿದ್ದ ಒಂದು ದಿನದ ಗಂಡು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೋಡಸಾ ಮೂಲದ ಆಸ್ಪತ್ರೆಯಿಂದ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೋಡಸಾ-ಧನ್ಸುರ ರಸ್ತೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಡಿಬಿ ವಾಲಾ ತಿಳಿಸಿದ್ದಾರೆ.

ಮಗು, ಅವರ ತಂದೆ ಜಿಗ್ನೇಶ್ ಮೋಚಿ (38ವ), ಅಹಮದಾಬಾದ್‌ನ ವೈದ್ಯ ಶಾಂತಿಲಾಲ್ ರೆಂಟಿಯಾ (30ವ) ಮತ್ತು ಅರ್ವಳ್ಳಿ ಮೂಲದ ನರ್ಸ್ ಭೂರಿಬೆನ್ ಮನಾತ್ (23ವ) ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಮೋಚಿಯ ಇಬ್ಬರು ಸಂಬಂಧಿಕರು ಮತ್ತು ಖಾಸಗಿ ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಮೂವರು ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಿಗ್ನೇಶ್ ಮೋಚಿ ನೆರೆಯ ಮಹಿಸಾಗರ್ ಜಿಲ್ಲೆಯವರಾಗಿದ್ದು, ಅವರ ನವಜಾತ ಶಿಶು ಹೆರಿಗೆಯ ನಂತರ ಮೋಡಸಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ದಾರಿ ಮಧ್ಯೆ ಆಂಬ್ಯುಲೆನ್ಸ್ ಗೆ ಬೆಂಕಿಗೆ ಆಹುತಿಯಾಯಿತು ಎಂದು ವಾಲಾ ಹೇಳಿದರು.

ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆಂಬ್ಯುಲೆನ್ಸ್ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಚಾಲಕನಿಗೆ ಗೊತ್ತಾದ ನಂತರ ಪೆಟ್ರೋಲ್ ಪಂಪ್ ಬಳಿ ಆಂಬ್ಯುಲೆನ್ಸ್ ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂತು.

ಚಾಲಕ ಮತ್ತು ಮುಂಭಾಗದ ಸೀಟಿನಲ್ಲಿದ್ದ ಮೋಚಿಯ ಇಬ್ಬರು ಸಂಬಂಧಿಕರು ಗಾಯಗಳೊಂದಿಗೆ ಪಾರಾಗಿದ್ದರೂ, ಮಗು, ತಂದೆ, ವಾಹನದ ಹಿಂಭಾಗದಲ್ಲಿದ್ದ ವೈದ್ಯರು ಮತ್ತು ನರ್ಸ್ ಬೆಂಕಿಯಲ್ಲಿ ಸುಟ್ಟು ಕರಕಲಾದರು ಎಂದು ವಾಲಾ ಹೇಳಿದರು.

ಗಾಯಗೊಂಡವರನ್ನು ಚಾಲಕ ಅಂಕಿತ್ ಠಾಕೂರ್ ಮತ್ತು ಜಿಗ್ನೇಶ್ ಮೋಚಿಯ ಸಂಬಂಧಿಕರಾದ ಗೌರಂಗ್ ಮೋಚಿ ಮತ್ತು ಗೀತಾಬೆನ್ ಮೋಚಿ ಎಂದು ಗುರುತಿಸಲಾಗಿದೆ.

ಘಟನೆಯ ತನಿಖೆ ನಡೆಸಲು ಮತ್ತು ದುರಂತಕ್ಕೆ ಕಾರಣಗಳನ್ನು ಹುಡುಕಲು ವಿಧಿವಿಜ್ಞಾನ ತಜ್ಞರನ್ನು ಕರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಜಡೇಜಾ ತಿಳಿಸಿದ್ದಾರೆ.

No Comments

Leave A Comment