ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿಯವರಿಂದ ಸಾಕ್ಷಾ ಕೇಳಿದ ಬಿಜೆಪಿ ನಾಯಕರಿಗೆ ಬಿಹಾರ ಚುನಾವಣಾ ಫಲಿತಾಂಶಕ್ಕಿಂತ ದೊಡ್ಡ ಸಾಕ್ಷ ಬೇಕೆ?- ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ

ಉಡುಪಿ: ಈ ಹಿಂದೆ ನಡೆದ ಲೋಕಸಭಾ ಚುನಾವಣೆ ಹಾಗೂ ಹರಿಯಾಣ ಮತ್ತು ಮಹಾರಾಷ್ಟ್ರ ಮತ್ತೆ ಮಧ್ಯಪ್ರದೇಶದ ಚುನಾವಣೆಯ ಪಲಿತಾಂಶವನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಕೂಡ ಮತಗಲ್ಲತನ ನಡೆದಿದ್ದು ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ನೀಡಿದ್ದರೂ ಕೂಡ ಅದನ್ನು ಪರಿಗಣಿಸದೆ ನಮಗೆ ಇನ್ನೂ ಸಾಕ್ಷ ಬೇಕು ಎಂದು ಹೇಳಿ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿಯವರ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದು ಅದಕ್ಕೂ ಬಗ್ಗದ ರಾಹುಲ್ ಗಾಂಧಿಯವರು ಬಿಹಾರ ಚುನಾವಣೆಯಲ್ಲಿ ಮತಕಳವು ಆಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದು ಕೂಲಂಕುಶವಾಗಿ ಚುನಾವಣಾ ಆಯೋಗಕ್ಕೆ ತಿಳಿಸಿದ್ದು ಅದನ್ನು ಈ ಬಿಜೆಪಿಯವರು ಮತ್ತು ಚುನಾವಣಾ ಆಯೋಗ ತಿರಸ್ಕರಿಸಿದ್ದು ರಾಹುಲ್ ಗಾಂಧಿಯವರ ವಿರುದ್ಧವೇ ಸುಳ್ಳು ಅಪಾದನೆಯನ್ನು ಮಾಡಿರುತ್ತಾರೆ.

ಆದರೆ ಬಿಹಾರದಲ್ಲಿ ಆಡಳಿತ ನರಿಸುತ್ತಿರುವ ಬಿಜೆಪಿ ಹಾಗೂ ಜೆಡಿಯು ಪಕ್ಷದ ಬಗ್ಗೆ ಜನಸಾಮಾನ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಪ್ರಚಾರಕ್ಕೆ ಹೋದ ಸಚಿವರುಗಳನ್ನೇ ಅಂದರೆ ಉಪಮುಖ್ಯಮಂತ್ರಿಯನ್ನೇ ಓಡಿಸಿದ ಘಟನೆ ಬಿಹಾರದಲ್ಲಿ ನಡೆದಿದ್ದು ಇಂದು ಅಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಸರಕಾರ ಪುನರಪಿ ಅಧಿಕಾರಕ್ಕೆ ಬರುತ್ತಿದೆ ಎಂದಾದರೆ ಇದು ಜನರು ಕೊಟ್ಟ ಮತದಿಂದ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಇದುವೇ ರಾಹುಲ್ ಗಾಂಧಿ ಅವರು ಮತ ಚೋರಿಯ ಬಗ್ಗೆ ದೇಶದಾದ್ಯಂತ ಅಭಿಯಾನ ನಡೆಸಿದ್ದು ಇಂದು ಇದಕ್ಕೆ ಸರಿಯಾದ ಸಾಕ್ಷಿ ಸಿಕ್ಕಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment