ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನ.16ಕ್ಕೆ ಡಯಾಬಿಟೀಸ್​ ಮೇಳ-ಡಾ. ಜಿ.ಎಸ್​. ಚಂದ್ರಶೇಖರ್​

ಉಡುಪಿ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆದರ್ಶ ಚಾರಿಟೇಬಲ್​ ಟ್ರಸ್ಟ್​, ಜಿಲ್ಲಾಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಟಕ, ರೆಡ್​ಕ್ರಾಸ್​ ಸಂಸ್ಥೆ ಸಹಯೋಗದಲ್ಲಿ ‘ಡಯಾಬಿಟೀಸ್​ ಮೇಳ’ವನ್ನು ನ.16ರಂದು ಬೆಳಿಗ್ಗೆ 9 ರಿಂದ 4ರವರೆಗೆ ಬೋರ್ಟ್​ ಹೈಸ್ಕೂಲ್​ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು  ಈ ಕಾರ್ಯಕ್ರಮವನ್ನು ಶಾಸಕ ಯಶ್ಪಾಲ್​ ಸುವರ್ಣ ಉದ್ಘಾಟಿಸಲಿದ್ದಾರೆ. ಡಿಎಚ್​ಒ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಶೋಕ್​, ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ , ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ್​, ಎಪಿಐ ಅಧ್ಯಕ್ಷ ಡಾ. ಸುರೇಶ್​ ಹೆಗ್ಡೆ, ಐಎಂಎ ಅಧ್ಯಕ್ಷ ಡಾ. ಅಶೋಕ್​ ಕುಮಾರ್​ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೇಳದಲ್ಲಿ ಮಾದರಿ ಡಯಾಬಿಟೀಸ್​ ಪಥ್ಯಾಹಾರ ಪ್ರದರ್ಶನ, ವ್ಯಾಯಾಮ ಮತ್ತು ಯೋಗ ಪ್ರಾತ್ಯಕ್ಷಿಕೆ, ಆದರ್ಶ ದೇಹತೂಕ ಪ್ರಾತ್ಯಕ್ಷಿಕೆ, ಇನ್ಸುಲಿನ್​ ಉಪಯೋಗಿಸುವ ಮಾಹಿತಿ, ಡಯಾಬಿಟೀಸ್​ ಮತ್ತು ಹೃದ್ರೋಗ ಖಾಯಿಲೆಗಳು, ಡಯಾಬಿಟೀಸ್​ ಮತ್ತು ಕಿಡ್ನಿ ತೊಂದರೆಗಳು, ಗ್ಲುಕೋಮೀಟರ್​ ಉಪಯೋಗಿಸುವ ವಿಧಾನ ಬಗ್ಗೆ ಮಾಹಿತಿ ನೀಡಲಾಗುವುದು. ಉಚಿತವಾಗಿ ರಕ್ತ ಪರೀಕ್ಷೆ, ಕಿಡ್ನಿ ಪರೀಕ್ಷೆ, ಇಸಿಜಿ, ಕಣ್ಣಿನ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ನಿರ್ದೇಶಕ ಡಾ. ಸುಹಾಸ್​ ಜಿ.ಸಿ, ಮ್ಯಾನೇಜರ್​ ಡಿಯಾಗೋ ಕ್ವಾಡ್ರಸ್​, ಮಾರುಕಟ್ಟೆ ವಿಭಾಗದ ರೋವಿನ್​ ಡಿಸೋಜಾ ಉಪಸ್ಥಿತರಿದ್ದರು.

No Comments

Leave A Comment