ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ದೆಹಲಿ ಸ್ಫೋಟದ ಲಿಂಕ್: ಫರಿದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರ ಬಂಧನ; NIA ತನಿಖೆ
ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ತಂಡಗಳು ಚುರುಕುಗೊಳಿಸಿದ್ದು, ಸ್ಪೋಟದ ಲಿಂಕ್ ಗೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.ನಿನ್ನೆ ದಿನ ಸಂಭವಿಸಿದ ಸ್ಪೋಟ ಸೇರಿದಂತೆ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮೂವರು ವೈದ್ಯರ ಹೆಸರು ಬೆಳಕಿಗೆ ಬಂದ ನಂತರ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯ ರಾಷ್ಟ್ರದಾದ್ಯಂತ ಸುದ್ದಿಯಾಗಿದೆ.
ಇಂದು ಬೆಳಗ್ಗೆ ವಿಶ್ವವಿದ್ಯಾಲಯದ ಕ್ಯಾಂಪಸ್ ತಲುಪಿದ ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು, ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಫರಿದಾಬಾದ್‌ನಿಂದ ಬೃಹತ್ ಸ್ಫೋಟಕಗಳ ಸಾಗಣೆ ಮತ್ತು ನಂತರ ಸ್ಥಳೀಯ ಜನರೊಂದಿಗೆ ಮಾತನಾಡಿ, ಮೂವರು ವೈದ್ಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.ಬಾಂಬ್ ಸ್ಪೋಟದಲ್ಲಿ ವೈದ್ಯರಾದ ಮುಜಮ್ಮಿಲ್ ಶಕೀಲ್, ಉಮರ್ ಮೊಹಮ್ಮದ್ ಮತ್ತು ಶಹಿನಾ ಶಾಹಿದ್ ಅವರ ನಂಟಿರುವುದು ಕಂಡುಬಂದಿದೆ. ಮುಜಮ್ಮಿಲ್ ಮತ್ತು ಉಮರ್ ಕಾಶ್ಮೀರದವರು ಮತ್ತು ಶಹೀನ್ ಲಖನೌದವರು. ಈ ಮೂವರೂ ಫರಿದಾಬಾದ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮುಜಮ್ಮಿಲ್ ಹೆಸರು ಕೇಳಿಬಂದಿತ್ತು. ಮುಜಮ್ಮಿಲ್ ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ ಬಾಂಬ್ ತಯಾರಿಕೆಯಲ್ಲಿ ಬಳಸಲಾದ ಸುಮಾರು 2,900 ಕೆಜಿ ವಸ್ತುಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಸ್ತವವಾಗಿ ಅವರು ವಿಶ್ವವಿದ್ಯಾಲಯದ ಆವರಣದಲ್ಲಿಯೇ ವಾಸವಿದ್ದರೂ ಸಹ ಈ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದರು.ಈ ಎರಡೂ ಕೊಠಡಿಗಳಲ್ಲದೆ ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಜಮ್ಮಿಲ್ ಸಹೋದ್ಯೋಗಿ ಶಾಹೀನ್ ಶಾಹಿದ್ ಕಾರಿನಿಂದ ರೈಫಲ್, ಶಸಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಾಹಿದ್, ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಾರತ ಶಾಖೆಯ ಮಹಿಳಾ ವಿಭಾಗ ಜಮತ್ ಉಲ್-ಮೊಮಿನಾತ್ ನ ಮುಖ್ಯಸ್ಥರಾಗಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮುಜಮ್ಮಿಲ್ ಹೆಸರು ಕೇಳಿಬಂದಿತ್ತು. ಮುಜಮ್ಮಿಲ್ ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ ಬಾಂಬ್ ತಯಾರಿಕೆಯಲ್ಲಿ ಬಳಸಲಾದ ಸುಮಾರು 2,900 ಕೆಜಿ ವಸ್ತುಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಸ್ತವವಾಗಿ ಅವರು ವಿಶ್ವವಿದ್ಯಾಲಯದ ಆವರಣದಲ್ಲಿಯೇ ವಾಸವಿದ್ದರೂ ಸಹ ಈ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದರು.
ಈ ಎರಡೂ ಕೊಠಡಿಗಳಲ್ಲದೆ ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಜಮ್ಮಿಲ್ ಸಹೋದ್ಯೋಗಿ ಶಾಹೀನ್ ಶಾಹಿದ್ ಕಾರಿನಿಂದ ರೈಫಲ್, ಶಸಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಾಹಿದ್, ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಾರತ ಶಾಖೆಯ ಮಹಿಳಾ ವಿಭಾಗ ಜಮತ್ ಉಲ್-ಮೊಮಿನಾತ್ ನ ಮುಖ್ಯಸ್ಥರಾಗಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.