ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಮೋದಿಯವರ ಉಡುಪಿ ಭೇಟಿಗೆ ಭರದ ಸಿದ್ದತೆ-ಪೊಲೀಸರಿ೦ದ ಮಾಹಿತಿ ಸ೦ಗ್ರಹ-5ಸಾವಿರ ಮ೦ದಿ ಪೊಲೀಸರ ನಿಯೋಜನೆ-75ಸಾವಿರ ಮ೦ದಿಗೆ ಊಟದ ವ್ಯವಸ್ಥೆ-ಕಾರ್ಯಕ್ರಮಕ್ಕೆ 6 ಕೋಟಿ ವೆಚ್ಚ

ಉಡುಪಿ: ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಕೃಷ್ಣಮಠಕ್ಕೆ ಭಾರತದ ಪ್ರಧಾನಮ೦ತ್ರಿಯವರಾದ ನರೇ೦ದ್ರ ಮೋದಿಯವರು ನವೆ೦ಬರ್ 28ರ೦ದು ಆಗಮಿಸಲಿದ್ದು ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಪೂರ್ವ ತಯಾರಿಯನ್ನು ಸರಕಾರಿ ಇಲಾಖೆ ಹಾಗೂ ಶ್ರೀಕೃಷ್ಣಮಠದ ಪರ್ಯಾಯ ಮಠವಾದ ಪುತ್ತಿಗೆ ಮಠದ ವ್ಯವಸ್ಥಾಪಕರು ನಡೆಸುತ್ತಿದ್ದಾರೆ.

ಮೋದಿಯವರು ದೆಹಲಿಯಿ೦ದ ವಿಶೇಷ ವಿಮಾನದ ಮೂಲಕವಾಗಿ ಮ೦ಗಳೂರು ವಿಮಾನ ನಿಲ್ದಾಣಕ್ಕೆ ಬ೦ದು ಅಲ್ಲಿ೦ದ ಮಿಲಿಟರಿ ಹೆಲಿಕ್ಪಾಟರ್ ಮೂಲಕವಾಗಿ ಉಡುಪಿಯ ಆದಿಉಡುಪಿಯಲ್ಲಿರುವ ಹೆಲಿಪ್ಯಾಡ್ ನಲ್ಲಿ ತಲುಪಲಿದ್ದಾರೆ.ಬಳಿಕ ಅವರು ವಾಹನದ ಮೂಲಕ ಆದಿಉಡುಪಿ ಮಾರ್ಗವಾಗಿ ಕರಾವಳಿ ಜ೦ಕ್ಷನ್ , ಬನ್ನ೦ಜೆ, ಕಲ್ಸ೦ಕ ಮಾರ್ಗವಾಗಿ ರಾಜಾ೦ಗಣದ ಪಾರ್ಕಿ೦ಗ್ ಪೇಲ್ಸ್ ಮಾರ್ಗವಾಗಿ ಶ್ರೀಕೃಷ್ಣಮಠಕ್ಕೆ ತಲುಪಲಿದ್ದಾರೆ.ಆ ಬಳಿಕ ಅವರನ್ನು ಪರ್ಯಾಯಮಠದವರು ಆದರದಿ೦ದ ಸ್ವಾಗತಿಸಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ದರ್ಶನಮಾಡಿಸಲಿದ್ದಾರೆ.

ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಹಲವು ಸುತ್ತಿನ ಮಾತುಕತೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಸುಮಾರು ೫ಸಾವಿರ ಮ೦ದಿ ಪೊಲೀಸ್ ಸಿಬ್ಬ೦ದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಸುಮಾರು 75ಸಾವಿರ ಮ೦ದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಪೆ೦ಡಾಲ್ ನಿರ್ಮಾಣ, ಸಮಾರ೦ಭದ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ ಹಾಗೂ ಹೆಲಿಕ್ಪಾಟರ್ ವೆಚ್ಚ ಇನ್ನಿತರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಇದರ ವೆಚ್ಚ ಸುಮಾರು 6ವರೆಕೋಟಿ ರೂಪಾಯಿ ಎ೦ದು ಹೇಳಲಾಗುತ್ತಿದೆ.ಇದಕ್ಕಾಗಿ ವಿದೇಶದಲ್ಲಿನ ಹಾಗೂ ವಿವಿಧ ದಾನಿಗಳಿ೦ದ ಹಣಕಾಸಿನ ನೆರವು ಬರುತ್ತಿದೆ ಎ೦ದು ಮೂಲವೊ೦ದರಿ೦ದ ತಿಳಿದು ಬ೦ದಿದೆ.

ಅದೇ ದಿನದ೦ದು ಪ್ರಧಾನ ಮ೦ತಿಯವರು ಗೋವಾದ ಪರ್ತಗಾಳಿಯಲ್ಲಿ ಗೋಕರ್ಣಮಠದಲ್ಲಿ ನಡೆಯಲಿರುವ ಕಾರ್ಯಕ್ರಮ ಭಾಗವಹಿಸಲಿದ್ದಾರೆ.ಇಲ್ಲಿನ ತಯಾರಿಯ ವೆಚ್ಚವನ್ನು ಅಲ್ಲಿನ ಗೋವಾ ಸರಕಾರ ನಿರ್ವಹಿಸಲಿದೆ.

No Comments

Leave A Comment