‘ಶಕ್ತಿ ಯೋಜನೆ’ಗೆ ಸಿಕ್ಕಿತು ವಿಶ್ವ ಮನ್ನಣೆ: ಲಂಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಒಂದೆಡೆ ಟೀಕೆ ವ್ಯಕ್ತವಾಗುತ್ತಲೇ ಇದೆ. ಬಿಟ್ಟಿ ಭಾಗ್ಯಗಳನ್ನು ಜನರಿಗೆ ನೀಡಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂಬ ಕೂಗು ಕೇಳಿಬರುವ ಮಧ್ಯೆ ಮಹಿಳೆಯರಿಗೆ ಸರ್ಕಾರಿ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಇರುವ ‘ಶಕ್ತಿ’ ಯೋಜನೆ ವಿಶ್ವ ದಾಖಲೆ ಮಾಡಿದೆ.
ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (London Book Of World Records) (ಎಲ್‌ಬಿಡಬ್ಲ್ಯೂಆರ್) ನಿರ್ಮಿಸಿದ್ದು, ಅಧಿಕೃತವಾಗಿ ಪ್ರಮಾಣಪತ್ರ ಸಿಕ್ಕಿದೆ. ಈ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಪಡೆದಿರುವ ಅತಿ ಹೆಚ್ಚು ಉಚಿತ ಬಸ್ ಪ್ರಯಾಣಗಳ ಸಂಖ್ಯೆ 564.10 ಕೋಟಿ ಎಂದು ದಾಖಲಾಗಿದೆ. ಈ ಸಾಧನೆಯನ್ನು ಗಮನಿಸಿ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ನೀಡಿದೆ.
ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ‘ಶಕ್ತಿ’













































