ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ವೆನೆಜುವೆಲಾ ಉಕ್ಕಿನ ಮಹಿಳೆ ಮಾರಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ; ಸ್ವಘೋಷಿತ ಶಾಂತಿದೂತ ಟ್ರಂಪ್‌ಗೆ ಮುಖಭಂಗ
ಸ್ಟಾಕ್‌ಹೋಮ್: ಬಹುನಿರೀಕ್ಷಿತ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗಿದ್ದು, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ, ಉಕ್ಕಿನ ಮಹಿಳೆ ಮಾರಿಯಾ ಕೊರಿನಾ ಮಚಾಡೊ ಅವರು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಸ್ವಘೋಷಿತ ಶಾಂತಿದೂತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಮುಖಭಂಗವಾಗಿದೆ.
ವೆನೆಜುವೆಲಾದ ವಿರೋಧ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಮಾರಿಯಾ ಅವರು “ಒಂದು ಕಾಲದಲ್ಲಿ ಆಳವಾಗಿ ವಿಭಜಿಸಲ್ಪಟ್ಟಿದ್ದ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ್ದಕ್ಕಾಗಿ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾಚಾಡೋ ಅವರ ನೇತೃತ್ವದಲ್ಲಿ ವಿರೋಧ ಪಕ್ಷದವರು ವೆನಿಜುವೆಲಾದಲ್ಲಿ “ಸ್ವತಂತ್ರ ಚುನಾವಣೆಗಳು ಮತ್ತು ಪ್ರಾತಿನಿಧಿಕ ಸರ್ಕಾರದ ಬೇಡಿಕೆಯಲ್ಲಿ ಸಾಮಾನ್ಯ ನೆಲೆಯನ್ನು ಕಂಡುಕೊಂಡರು” ಎಂದು ಸಮಿತಿ ಹೇಳಿದೆ.
ಈ ಘೋಷಣೆಯು ಬಹಳ ಹಿಂದಿನಿಂದಲೂ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಕಾಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ನಿರಾಶೆ ಉಂಟು ಮಾಡಿದೆ. ಟ್ರಂಪ್, ತಾವು ನೊಬೆಲ್ ಪ್ರಶಸ್ತಿಗೆ ಅರ್ಹ ಆಯ್ಕೆ ಎಂದು ಪದೇ ಪದೇ ಹೇಳಿಕೊಂಡಿದ್ದರ ಹೊರತಾಗಿಯೂ. ನಾರ್ವೇಜಿಯನ್ ನೋಬೆಲ್ ಸಮಿತಿಯು ಮರಿಯಾ ಕೊರಿನಾ ಮಚಾಡೊ ಅವರನ್ನು ಆಯ್ಕೆ ಮಾಡಿದೆ.