ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...

ಉಡುಪಿ ;ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಜಯದಶಮಿಯ೦ದು ಚಂಡಿಕಾಯಾಗ ಸ೦ಪನ್ನ…

ಉಡುಪಿ:ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ನವರಾತ್ರಿಯ ದಶಮಿ ದಿನವಾದ ಗುರುವಾರದ೦ದು ಚಂಡಿಕಾ ಯಾಗ ನಡೆಯಿತು.

ಅರ್ಚಕರಾದ ಕೃಷ್ಣಾನಂದ ಭಟ್ ಮಣಿಪಾಲ್ , ಶರತ್ ಭಟ್ ಮಲ್ಪೆ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಿ ಕೊಟ್ಟರು. ದೇವಳದ ಅರ್ಚಕರಾದ ದೀಪಕ್ ಭಟ್ , ದಯಾಘನ್ ಭಟ್ , ವಿನಾಯಕ ಭಟ್ ಹಾಗೂ ಚಂಡಿಕಾ ಯಾಗದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಕೈಲಾಸನಾಥ್ ಶೆಣೈ ದಂಪತಿಗಳು ಸಹಕರಿಸಿದರು .

ಶ್ರೀದೇವರಿಗೆ ವಿಶೇಷ ಅಲಂಕಾರ , ಸಮೂಹಿಕ ನಮಸ್ಕಾರ , ಪೂರ್ಣಾಹುತಿ , ಮಹಾಪೂಜೆ , ಪಲ್ಲ ಪೂಜೆ , ಸಮಾರಾಧನೆ , ಶ್ರೀ ಶಾರದಾ ದೇವಿಗೆ ಅರ್ಪಿಸಿದ ಸೀರೆಗಳನ್ನು ಏಲಂ ನೆಡೆಸಿ ವಿತರಣೆ ಮಾಡಲಾಯಿತು.

ಅಲೆವೂರು ಗಣೇಶ್ ಕಿಣಿ , ಪಿ ವಿ ಶೆಣೈ , ವಸಂತ್ ಕಿಣಿ , ಶಾಂತರಾಮ ಪೈ , ಅಶೋಕ್ ಬಾಳಿಗಾ , ಉಮೇಶ್ ಪೈ , ಆಡಳಿತ ಮಂಡಳಿಯ ಸದಸ್ಯರೂ ಹಾಗೂ ಜಿ ಎಸ್ ಬಿ ಯುವಕ ಮ೦ಡಳಿ, ಮಹಿಳಾ ಮಂಡಳಿಯ ಸದಸ್ಯರು ಹಾಗೂ ಶ್ರೀ ಶಾರದಾ ಮೋಹೋತ್ಸವ ಸಮಿತಿಯ ಪದಾಧಿಕಾರಿಗಳು , ನೂರಾರು ಭಕ್ತರು ಉಪಸಿತರಿದ್ದರು.

No Comments

Leave A Comment