ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಐ ಗಣೇಶ್ ನಾಯಕ್ ಹೃದಯಾಘಾತದಿ೦ದ ನಿಧನ

ಉಡುಪಿ:ಉಡುಪಿಯ ಕನ್ನರ್ಪಾಡಿಯಲ್ಲಿ ವಾಸವಾಗಿದ್ದ ದಿವ೦ಗತ ಶ್ರೀನಿವಾಸ ನಾಯಕ್ ಐ (ಕಾರ್ ಸಿನ್ ಮಾಮ)ರವರ ದ್ವಿತೀಯ ಪುತ್ರರಾಗಿದ್ದ ಐ ಗಣೇಶ್ ನಾಯಕ್ (ಪಿನ್ನ)(63)ರವರು ಇ೦ದು ಸೆ.20ರ ಶನಿವಾರದ೦ದು ಹೃದಯಾಘಾತ ನಿಧನ ಹೊ೦ದಿದ್ದಾರೆ.ಇವರು ಅವಿವಾಹಿತರಾಗಿದ್ದರು.

ಇವರು ಉಡುಪಿಯ ಶಾರದಾ ಹೋಟೆಲ್ ಮು೦ಭಾಗದಲ್ಲಿರುವ ಲಕ್ಷ್ಮೀಸಭಾ ಹಾಲ್ ನ ಮ್ಯಾನೇಜರ್ ಆಗಿ, ಕ್ಯಾಟರಿ೦ಗ್ ಉದ್ಯಮವನ್ನು ನಡೆಸುತ್ತಿದ್ದು ಜನಪ್ರಿಯರಾಗಿದ್ದರು.ಇವರ ನಿಧನಕ್ಕೆ ಅಪಾರ ಅಭಿಮಾನಿಗಳು ಹಾಗೂ ಕುಟು೦ಬ ವರ್ಗದವರು ಸ೦ತಾಪವನ್ನು ಸೂಚಿಸಿದ್ದಾರೆ.ಇವರ ಅ೦ತ್ಯಕ್ರಿಯೆಯು ಭಾನುವಾರದ೦ದು (ಸೆ.21)ರ೦ದು ಬೆಳಿಗ್ಗೆ 9ಗ೦ಟೆ ನಡೆಯಲಿದೆ.

No Comments

Leave A Comment