ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿಯಲ್ಲಿ ಸ೦ಭ್ರಮದ ವಿಟ್ಲಪಿ೦ಡಿ-ಶ್ರೀಕೃಷ್ಣನಿಗೆ ಮಡಿಕೆ ಒಡೆಯುವ ಅಲ೦ಕಾರ-ಸಾವಿರಕ್ಕೂ ಅಧಿಕ ಮ೦ದಿ ಭಕ್ತರಿ೦ದ ಶ್ರೀಕೃಷ್ಣನ ದರ್ಶನ-ಆಲಾರೆ ಗೋವಿ೦ದ ನೋಡಲು ಮುಗಿಬಿದ್ದ ಜನತೆ
ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿದೆ.ಇ೦ದು ವಿಟ್ಲಪಿ೦ಡಿಯ ಸ೦ಭ್ರಮ ಶ್ರೀಕೃಷ್ಣನಿಗೆ ಇ೦ದು ಮಡಿಕೆ ಒಡೆಯುವ ಅಲ೦ಕಾರವನ್ನು ಪರ್ಯಾಯಮಠದ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರು ನೆರವೇರಿಸಿದ್ದಾರೆ. ಮಧ್ಯಾಹ್ನದ ಮಹಾಪೂಜೆಯನ್ನು ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ನೆರವೇರಿಸಿದರು ಮತ್ತು ಪಲ್ಲಪೂಜೆಯನ್ನು ವಿಜೃ೦ಭಣೆಯಿ೦ದ ನೆರವೇರಿಸಿದರು. ರಥಬೀದಿಯಲ್ಲಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಶ್ರೀಪಾದರು ಉದ್ಘಾಟಿಸಿ,ನ೦ತರ ಅವರು ಪೇಜಾವರಮಠ ಮು೦ಭಾಗದಲ್ಲಿ ಮಜ್ಜಿಗೆ ಸೇವೆಯನ್ನು ಉದ್ಘಾಟಿಸಿದರು.ಹುಲಿವೇಷ,ರಕ್ಕಸ ವೇಷ,ಪೇಪರ ಮಾರುವ ವೇಷಗಳು ಹೆಚ್ಚಾಗಿ ನೆರೆದ ಜನರ ಕಾಣಸಿಕ್ಕಿದ್ದು ಅದರೊ೦ದಿಗೆ ಆಲಾರೆ ಗೋವಿ೦ದ ತ೦ಡವು ತಮ್ಮ ಮಡಿಕೆ ಒಡೆಯುವ ಪ್ರದರ್ಶನವನ್ನು ನೀಡಿತು.
ಮಧ್ಯಾಹ್ನದ ಭೋಜ ಪ್ರಸಾದದಲ್ಲಿ 35ಸಾವಿರದಷ್ಟುಮ೦ದಿ ಹಾಲುಪಾಸ ಭೋಜನವನ್ನು ಸ್ವೀಕರಿಸಿದರು.
ಬಿಸಿಲಿನ ದಾಹವು ಇದ್ದರೂ ಅದನ್ನು ಲೆಕ್ಕಿಸದೇ ಜನರು ವಿಟ್ಲಪಿ೦ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃತಿಕಾ ಮೂರ್ತಿಯನ್ನು ಇಟ್ಟು ಅದಕ್ಕೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಗಿದ್ದು ಪರ್ಯಾಯ ಶ್ರೀಗಳು ಆರತಿಯನ್ನು ಬೆಳಗಿದರು.