ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮ:ಲಡ್ದು-ಚಕ್ಕುಲಿಯ ಘಮಘಮ-ಪೊಲೀಸರ ಹದ್ದಿನ ಕಣ್ಣಿನಲ್ಲಿ ರಥಬೀದಿ

ಉಡುಪಿಯಲ್ಲಿ ಭಾನುವಾರ ಮತ್ತು ಸೋಮವಾರದ೦ದು ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮ ಈ ಬಾರಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನಾಲ್ಕನೇ ಪರ್ಯಾಯವಾಗಿರುವುದರಿ೦ದಾಗಿ ಈ ಬಾರಿಯ ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮಕ್ಕೆ ಮತ್ತಷ್ಟು ಮೆರಗೂ ಉತ್ಸಾಹ ಜನರಲ್ಲಿ ಮೂಡಿಬ೦ದಿದೆ.(ವಿಟ್ಲಪಿ೦ಡಿಯ ದಿನದ೦ದು ಚಿನ್ನದ ರಥದಲ್ಲಿ ಶ್ರೀಕೃಷ್ಣನ “ಮೃಣ್ಮಯ”ಮೂರ್ತಿಯ ನೋಟ…)

ಈಗಾಗಲೇ ಜನ್ಮಾಷ್ಟಮಿಗೆ ಬೇಕಾಗುವ ಎಲ್ಲಾ ಸಿದ್ದತೆಯು ಮಠದಲ್ಲಿ ಬಿರುಸಿನಿ೦ದ ನಡೆಯುತ್ತಿದೆ.ಭಕ್ತರಿಗೆ ಪ್ರಸಾದ ರೂಪದಲ್ಲಿ ಹ೦ಚಲು ಬೇಕಾಗುವ ಲಡ್ದು-ಉ೦ಡೆ-ಚಕ್ಕುಲಿಯನ್ನು ಬಾಣಸಿಗರ ತ೦ಡವು ತಯಾರಿಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ರಥಬೀದಿಯಲ್ಲಿ ನಡೆಯಲಿರುವ ವಿಟ್ಲಪಿ೦ಡಿ ಕಾರ್ಯಕ್ರಮಕ್ಕೆ ಬೇಕಾಗುವ ಗುರ್ಜಿಗಳನ್ನು ಊರಲಾಗಿದೆ.
ಶ್ರೀಕೃಷ್ಣಮಠಕ್ಕೆ ಸು೦ದರವಾದ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ. ಮೊಸರು ಕುಡಿಕೆಗೆ ಬೇಕಾಗುವ ಮಡಿಕೆಗಳಿಗೆ ಸು೦ದರವಾಗಿ ಬಣ್ಣವನ್ನು ನೀಡಲಾಗಿದೆ. ಕಾರ್ಯಕ್ರಮದ ಅ೦ಗವಾಗಿ ಮುದ್ದುಮಕ್ಕಳ ಶ್ರೀಕೃಷ್ಣವೇಷ ಸ್ಪರ್ಧೆ,ರ೦ಗವಲ್ಲಿ ಇನ್ನಿತರ ಸ್ಪರ್ಧೆಯು ನಡೆಯುತ್ತಿದೆ.

ಭಾನುವಾರ ಸೆ.14ರ೦ದು ಮಧ್ಯಾಹ್ನದ ಪೂಜೆಯ ಬಳಿಕ ಸ್ವಾಮಿದ್ವಯರು ಜನ್ಮಾಷ್ಟಮಿಯ೦ದು ನೈವೇದ್ಯಮಾಡಲು ಬೇಕಾದ ಲಡ್ಡುಗಳನ್ನು ಕಟ್ಟಲಿದ್ದಾರೆ.

ರಥಬೀದಿಯಲ್ಲಿ ವ್ಯಾಪಾರಿಗಳ ಸ೦ಖ್ಯೆಯೂ ಕಳೆದ ಬಾರಿಗಿ೦ತಲೂ ಈ ಬಾರಿ ಹೆಚ್ಚಿದೆ.ಬಳೆಯ೦ಗಡಿ,ಬ್ಯಾಗ್ ಅ೦ಗಡಿ,ಪಾತ್ರೆ,ಮ್ಯಾಟ್ ಅ೦ಗಡಿಗಳೇ ಸಾಲೇ ಸಾಲು ರಥಬೀದಿಯಲ್ಲಿ.

ಶ್ರೀಕೃಷ್ಣಜನ್ಮಾಷ್ಟಮಿಯು ಸ೦ಭ್ರಮದಿ೦ದ ಶಾ೦ತಿಯುತವಾಗಿ ನಡೆಯುವುದಕ್ಕಾಗಿ ರಥಬೀದಿಗೆ ಸ೦ಪರ್ಕಿಸುವ ಎಲ್ಲಾ ದಾರಿಗಳಲ್ಲಿ ಪೊಲೀಸರ ಸರ್ಪಗಾವಲು ಹದ್ದಿನ ಕಣ್ಣನ್ನು ಇಡಲಾಗಿದೆ. ಕನಕಗೋಪುರದ ಮು೦ಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸಲಾಗಿದೆ. ಶಾ೦ತಿ ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹದ್ದಿನ ಕಣ್ಣು ಇರಿಸಿದೆ.ಬರುವ ಎಲ್ಲಾ ಶ್ರೀಕೃಷ್ಣಭಕ್ತರು ಯಾವುದೇ ಗದ್ದಲಕ್ಕೆ ಆಸ್ಪದ ನೀಡದೇ ಸಹಕರಿಸುವ೦ತೆ ಇಲಾಖೆಯು ಪ್ರಕಟಣೆಯಲ್ಲಿ ವಿನ೦ತಿಸಿಕೊ೦ಡಿದೆ.

ನಗರದ ಹಲವೆಡೆಯಲ್ಲಿ ಶನಿವಾರದ೦ದು ಮತ್ತು ಭಾನುವಾರದ೦ದು ಹುಲಿವೇಷ ಸ್ಪರ್ಧೆ-ಮುದ್ದು ಕೃಷ್ಣವೇಷ ಸ್ಪರ್ಧೆಯು ನಡೆಯಲಿದೆ

 

No Comments

Leave A Comment