ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ರೋಚಕಘಟ್ಟ ತಲುಪಿದ ಧರ್ಮಸ್ಥಳ ಬುರುಡೆ ಪ್ರಕರಣ: 6 ಮಂದಿಗೆ ತಪ್ಪದ ಸಂಕಷ್ಟ, ಎಸ್ಐಟಿಯಿಂದ ತೀವ್ರ ವಿಚಾರಣೆ
ಮಂಗಳೂರು:ಸೆ.11: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಈಗಾಗಲೇ ಬುರುಡೆ ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿ ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದೆ. ಚಿನ್ನಯ್ಯ ನೀಡಿದ ಹೇಳಿಕೆ ಆಧರಿಸಿ ಹಲವರ ವಿಚಾರಣೆಯನ್ನು ತೀವ್ರಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಗ್ಯಾಂಗ್‌ನ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಬುರುಡೆ ಕೇಸ್‌ನಲ್ಲಿ 6 ಮಂದಿಗೆ ಸಂಕಷ್ಟ ಎದುರಾಗಿದೆ.
ಬುರುಡೆ ಕೇಸ್‌ನಲ್ಲಿ ಗಿರೀಶ್ ಮಟ್ಟಣ್ಣನವರ್ನನ್ನು ಕಳೆದ 7 ದಿನದಿಂದ ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ಕೂಡಾ ವಿಚಾರಣೆ ಮಾಡಲಾಗಿದೆ. ಜಯಂತ್‌ರನ್ನು 8 ದಿನದಿಂದ ಗ್ರಿಲ್ ಮಾಡಲಾಗುತ್ತಿದ್ದು, ಇಂದೂ ವಿಚಾರಣೆ ಎದುರಿಸಿದ್ದಾರೆ. ಸೌಜನ್ಯ ಮಾವ ವಿಠ್ಠಲ ಗೌಡ ಮತ್ತು ಅವರ ಕಾರು ಚಾಲಕ ಪ್ರದೀಪ್‌ನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಯೂಟ್ಯೂಬರ್ ಅಬಿಷೇಕ್ಗೆ 7 ದಿನ ಹಾಗೆಯೇ ಕೇರಳ ಯೂಟ್ಯೂಬರ್ ಮನಾಫ್ಗೆ 3 ದಿನ ಗ್ರಿಲ್ ಮಾಡಲಾಗಿದೆ.
ಹೇಳಿಕೆಗಳಲ್ಲಿ ವ್ಯಾತ್ಯಾಸ ಕಂಡು ಬಂದರೆ ಬಂಧನ ಸಾಧ್ಯತೆ
ಪ್ರತಿಯೊಬ್ಬರನ್ನೂ ತೀವ್ರವಾಗಿ ವಿಚಾರಣೆ ಮಾಡಲಾಗುತ್ತಿದ್ದು, ಹೇಳಿಕೆಗಳಲ್ಲಿ ವ್ಯಾತ್ಯಾಸ ಕಂಡು ಬಂದರೆ ಬಂಧಿಸುವ ಸಾಧ್ಯತೆ ಇದೆ. ಬಿಎನ್ಎಸ್ ಕಾಯ್ದೆ 161 ರಡಿ 6 ಮಂದಿ ಹೇಳಿಕೆಯನ್ನು ದಾಖಲಿಸಲಾಗುತ್ತಿದ್ದು, ಬಲವಾದ ಸಾಕ್ಷ್ಯ ಸಿಕ್ಕಿದರೆ ಬಂಧಿಸಿ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಬುರುಡೆ ಗ್ಯಾಂಗ್ಗೆ ತಪ್ಪದ ಸಂಕಷ್ಟ
ಬುರುಡೆ ಕೇಸ್ ತನಿಖೆಯಲ್ಲಿ ಎಲ್ಲರನ್ನೂ ಕರೆಸಿ ವಿಚಾರಣೆ ಮಾಡಲಾ ಗುತ್ತಿದೆ. ಸಾಕ್ಷಿದಾರ, ಸಂಬಂಧಿತ ವ್ಯಕ್ತಿಯನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದ್ದು, ವಿಚಾರಣೆ ವೇಳೆ ವ್ಯಕ್ತಿಗೆ ತಿಳಿದಿರುವ ಮಾಹಿತಿ ನೀಡಬೇಕು. ಹೇಳಿಕೆಯನ್ನು ಲಿಖಿತವಾಗಿ ಅಧಿಕಾರಿ ದಾಖಲಿಕೊಳ್ಳುತ್ತಾರೆ. ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ಮಾತ್ರ ಬಂಧನ ಮಾಡಬಹುದು. ಯಾರಾದರೂ ವ್ಯತ್ಯಾಸದ ಹೇಳಿಕೆ ಕೊಟ್ಟರೆ ಮತ್ತೆ ವಿಚಾರಣೆ ನಡೆಸಿ, ಹೊಸ ಸಾಕ್ಷ್ಯ ಸಿಕ್ಕರೆ ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕವೂ ಹೇಳಿಕೆಯಲ್ಲಿ ವ್ಯಾತ್ಯಾಸ ಬಂದರೆ, ಆರೋಪಿಯಾಗಿ ಪರಿಗಣಿಸಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 41ರಡಿ ಬಂಧಿಸಲಾಗುತ್ತದೆ. ಬಂಧನ ಮಾಡಿ ವಿಚಾರಣೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಏತನ್ಮಧ್ಯೆ, ಎಸ್ಐಟಿ ವಿಚಾರಣೆಗೆ ನಾವು ಸಹಕಾರ ಕೊಡುತ್ತಿದ್ದೇವೆ. ದಾಖಲೆಗಳನ್ನೂ ನೀಡಿದ್ದೇವೆ ಎಂದು ಜಯಂತ್ ಹೇಳಿದ್ದಾರೆ. ಎಸ್‌ಐಟಿಯವರಿಗೆ ಸುಳ್ಳು ಹೇಳಲು ಆಗಲ್ಲ. ಸುಳ್ಳು ಹೇಳಿದರೆ ಲಾಕ್ ಆಗಬೇಕಾಗತ್ತದೆ ಎಂದಿದ್ದಾರೆ.
ಯೂಟ್ಯೂಬರ್ ವಿಚಾರಣೆ ಅಂತ್ಯಗೊಳಿಸಿ ಕಳುಹಿಸಿದ ಎಸ್ಐಟಿ
ಕೇರಳ ಯೂಟ್ಯೂಬರ್ ಮನಾಫ್ ಮತ್ತು ಅಭಿಷೇಕ್ ವಿಚಾರಣೆ ನಡೆಸಿದ ಎಸ್ಐಟಿ ಇಬ್ಬರ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಿದೆ. ನೋಟಿಸ್ ಕೊಟ್ಟಾಗ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇನ್ ಕ್ಯಾಮರಾದಲ್ಲಿ ಇಬ್ಬರ ಹೇಳಿಕೆ ದಾಖಲಿಸಲಾಗಿದ್ದು, ಅಭಿಷೇಕ್ ಲ್ಯಾಪ್ಟಾಪ್, 2 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಬುರುಡೆ ತಂದು ಕೊಟ್ಟಿದ್ದ ಸೌಜನ್ಯ ಮಾವ ವಿಠ್ಠಲ ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಬುಧವಾರ ಮಹಜರು ಮಾಡಲಾಗಿತ್ತು. ಒಂದೂವರೆ ಗಂಟೆ ಮಹಜರು ನಡೆಸಿ ಹೇಳಿಕೆ ದಾಖಲಿಸಲಾಗಿತ್ತು. ಮಟ್ಟಣ್ಣನವರ್ ಸೂಚನೆಯಂತೆ ಬುರುಡೆ ತಂದಿದ್ದ ವಿಠ್ಠಲ ಗೌಡಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ವಿಠ್ಠಲಗೌಡಗೆ ಬುರುಡೆ ಉರುಳು!
ಒಂದು ವರ್ಷದ ಹಿಂದೆ ಬುರುಡೆ ತಂದಿದ್ದ ವಿಠ್ಠಲ ಗೌಡ ಮತ್ತು ಪ್ರದೀಪ್, ಬಂಗ್ಲೆಗುಡ್ಡ ಕಾಡಂಚಿನಲ್ಲಿ ಬುರುಡೆ ಅಡಗಿಸಿಟ್ಟಿದ್ದರು ಎನ್ನಲಾಗಿದೆ. ಒಂದು ಕಡೆಯಿಂದ ಬುರುಡೆ ತೆಗೆದು ಮತ್ತೊಂದು ಕಡೆ, ಅಂದರೆ ದಟ್ಟಾರಣ್ಯದ ಮಧ್ಯೆ ಬುರುಡೆ ಇಟ್ಟಿದ್ದರು. ಮಟ್ಟಣ್ಣನವರ್ ನಿರ್ದೇಶನದಂತೆ ಅಡಗಿಸಿಟ್ಟಿದ್ದ ಬುರುಡೆಯನ್ನು ವಿಠ್ಠಲ ಗೌಡ ತಂದಿದ್ದ. ತರುವಾಗ ಬುರುಡೆ ತೆಗೆದು ಚೀಲಕ್ಕೆ ತುಂಬಿಸುವ ವಿಡಿಯೋವನ್ನು ಮಾಡಿಕೊಂಡಿದ್ದರು. ಬುರುಡೆ ಅಡಗಿಸಿಟ್ಟಿದ್ದ ಜಾಗವನ್ನ ವಿಠ್ಠಲ ಗೌಡ ಮಹಜರು ವೇಳೆ ತೋರಿಸಿದ್ದಾನೆ.
ಸದ್ಯ ಎಲ್ಲರ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿ, ಅವುಗಳನ್ನನು ತಾಳೆ ಹಾಕುತ್ತಿದೆ. ವ್ಯಾತ್ಯಾಸ ಕಂಡು ಬಂದರೆ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.