......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!
ಬೆಳ್ತಂಗಡಿ: ಉಜಿರೆಯಲ್ಲಿ ಬೈಕ್‌ಗೆ ಲಾರಿ ಢಿಕ್ಕಿ; ಚಿಕಿತ್ಸೆ ಫಲಿಸದೆ ಸವಾರ ಸಾವು
ಬೆಳ್ತಂಗಡಿ:ರಾಷ್ಟ್ರೀಯ ಹೆದ್ದಾರಿಯ ಉಜಿರೆ-ಚಾರ್ಮಾಡಿ ರಸ್ತೆಯಲ್ಲಿ ಸೆ. 3ರಂದು ಲಾರಿ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆ. 4ರ ಸಂಜೆ ಮೃತಪಟ್ಟಿದ್ದಾರೆ.
ಮೃತರನ್ನು ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಸಮೀಪದ ನಿವಾಸಿ ಪುರುಷೋತ್ತಮ ಅಲಿಯಾಸ್ ಬಾಲು (44) ಎಂದು ಗುರುತಿಸಲಾಗಿದೆ.
ಮೃತರು ಕ್ವಾರಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.