ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

34 ಮಾನವ ಬಾಂಬ್‌, 400 ಕೆಜಿ RDX, 14 ಪಾಕ್ ಭಯೋತ್ಪಾದಕರು! ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ; ಎಲ್ಲೆಡೆ ಕಟ್ಟೆಚ್ಚರ!

ಮುಂಬಯಿ: 34 ವಾಹನಗಳಲ್ಲಿ 400 ಕೆಜಿ ಆರ್​ಡಿಎಕ್ಸ್​ ಹೊತ್ತ ಮಾನವ ಬಾಂಬ್​ಗಳನ್ನು ಇರಿಸಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಸಂಚಾರ ಪೊಲೀಸ್​ ಠಾಣೆಗೆ ಬೆದರಿಕೆ ವಾಟ್ಸಾಪ್ ಸಂದೇಶ ಬಂದಿದ್ದು ನಗರದ್ಯಾಂತ ಭಾರೀ ಕಟ್ಟೆಚ್ಚರವಹಿಸಿದ್ದಾರೆ.

ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಈ ಬೆದರಿಕೆ ಬಂದಿದ್ದು, ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಾನವ ಬಾಂಬ್‌ಗಳನ್ನು ಹೊತ್ತೊಯ್ಯುವ 34 ಕಾರುಗಳನ್ನು ಬಳಸಿ 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಿ ಒಂದು ಕೋಟಿ ಜನರನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಸ್ಫೋಟಗಳಿಗೆ 400 ಕೆಜಿ ಆರ್‌ಡಿಎಕ್ಸ್ ಬಳಸಲಾಗುವುದು ಎಂದು ಹೇಳಿದೆ.

ಮುಂಬೈ ಪೊಲೀಸರು ಜಾಗರೂಕರಾಗಿದ್ದಾರೆ ಮತ್ತು ಇಡೀ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಪ್ರತಿಯೊಂದು ಸಾಧ್ಯತೆ ಮತ್ತು ಮೂಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಳೆ ಮುಂಬೈನಲ್ಲಿ ಗಣೇಶ ವಿಸರ್ಜನೆ ಸಮಾರಂಭ. ಅನಂತ ಚತುರ್ದಶಿ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಗಳೂ

No Comments

Leave A Comment