ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಶ್ರೀಶಾರದಾಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಟಿ.ಸುಬ್ರಹ್ಮಣ್ಯ ಪೈ ಆಯ್ಕೆ
ಉಡುಪಿ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಶ್ರೀಶಾರದಾಮಹೋತ್ಸವ ಸಮಿತಿಯ ಮಹಾಸಭೆಯು ಮ೦ಗಳವಾರದ೦ದು ದೇವಳದ ಶ್ರೀಕಲಾಮ೦ದಿರದಲ್ಲಿ ನಡೆಯಿತು.ಸಭೆಯಲ್ಲಿ ಗತವರುಷದ ಲೆಕ್ಕಪತ್ರವನ್ನು ಹಾಗೂ ವರದಿಯನ್ನು ಸಭೆಯಲ್ಲಿ ಮ೦ಡಿಸಲಾಯಿತು.ನ೦ತರ ಸರ್ವಾನುಮತಿಯಿ೦ದ ಅ೦ಗಿಕರಿಸಲ್ಪಟ್ಟಿತು.
ತದನ೦ತರ ಹೊಸ ಸಮಿತಿಯನ್ನು ಆಯ್ಕೆಮಾಡಲಾಯಿತು. ನೂತನ ಸಮಿತಿ ಗೌರವಾಧ್ಯಕ್ಷರಾಗಿ ಅಲೆವೂರು ಗಣೇಶ್ ಕಿಣಿ,ಅಧ್ಯಕ್ಷರಾಗಿ ಟಿ.ಸುಬ್ರಹ್ಮಣ್ಯ ಪೈ, ಕಾರ್ಯದರ್ಶಿಯಾಗಿ ಎಚ್ ವಿಘ್ನೇಶ್ ಶೆಣೈ,ಕೋಶಾಧಿಕಾರಿಯಾಗಿ ನಾಗೇಶ್ ವಿ ಪ್ರಭುರವರುಗಳನ್ನು ಸಭೆಯು ಅನುಮೋದಿಸಿತು.
ನ೦ತರ ಈ ಬಾರಿಯ ಶಾರದಾ ಮಹೋತ್ಸವದ ಬಗ್ಗೆ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ ಸಮಿತಿಯ ವಿವಿಧ ಜವಾಬ್ದಾರಿಯನ್ನು ವಹಿಸಿಕೊ೦ಡ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.