ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ ಆಚಾರ, ವಿಚಾರವನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯಬೇಕು-ಡಿ.ಕೆ. ಶಿವಕುಮಾ‌ರ್

ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ ಆಚಾರ, ವಿಚಾರವನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯ ಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನಿಗೆ ನಂಬಿಕೆ ಮುಖ್ಯ. ಹೀಗಾಗಿ ಧರ್ಮವನ್ನು ಉಳಿಸಿಕೊಂಡು ನಾವೆಲ್ಲರೂ ಮುಂದೆ ಸಾಗೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ, ಮಠದ ವತಿಯಿಂದ ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರೋತ್ಸವ ಸಂಭ್ರಮ ನಿಮಿತ್ತ ಶನಿವಾರ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮನ್ಮಧ್ವಾಚಾ ರ್ಯರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಧರ್ಮವು ಆತ್ಮವಿಶ್ವಾಸದ ದಾರಿದೀಪ ಎಂದರು.

ಶ್ರೀ ಕೃಷ್ಣನು ಉತ್ತಮ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ಪ್ರೇಮಿ, ರಾಜಕಾರಣಿಯೂ ಹೌದು. ಧರ್ಮ ರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ ಹಾಗೂ ಕೃಷ್ಣನ ತಂತ್ರಗಾರಿಕೆ ನಮ್ಮಲ್ಲಿ ಇರಬೇಕು ಎಂದ ಡಿ ಕೆ ಶಿವಕುಮಾರ್.​ ದಾರಿ ಇದ್ದಲ್ಲಿ ನಡೆಯ ಬೇಕು. ದಾರಿ ಇಲ್ಲದಲ್ಲಿ ದಾರಿ ಮಾಡಿಕೊಂಡು​ ​ಸಾಗಬೇಕು. ದೇವರು ವರವನ್ನು ನೀಡುವುದಿಲ್ಲ. ಶಾಪವನ್ನು ಕೊಡು ವುದಿಲ್ಲ ಅವಕಾಶವನ್ನು ಮಾತ್ರ ನೀಡುತ್ತಾನೆ.  ಎಂದರು.

ಅಂಚೆ ಚೀಟಿ ಬಿಡುಗಡೆ: ಕರ್ನಾಟಕ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ​ಮಣಿಪಾಲದ ಮಾಹೆ ವಿ.ವಿ.ಯಿಂದ ಪ್ರಾಯೋಜಿತ ಶ್ರೀ ಮನ್ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಮಾಡಿ  ಶುಭ ಹಾರೈಸಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠಾ ಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಪ್ರಸ್ತುತ ಜಗತ್ತಿನಲ್ಲಿ ಎಡಬಲ ಚಿಂತನೆ ಅತಿರೇಕಕ್ಕೆ ಏರಿದೆ. ಇಂತಹ ಸಂದರ್ಭದಲ್ಲಿ ಮಧ್ವಾಚಾರ್ಯರು ಸಾರಿದ ನಡುಪಂಥೀಯ ಚಿಂತನೆ ಸಮಾಜವನ್ನು ಅಥವಾ ಜಗತ್ತನ್ನು​ ​ಸುಸ್ಥಿತಿಗೆ ತರಬಹುದು.

ಆಚಾರ್ಯ ಮಧ್ವರು ಬಹಳ ವರ್ಷಗಳ ಹಿಂದೆ ಹೇಳಿದ ಸಿದ್ಧಾಂತವನ್ನು ವಿಜ್ಞಾನಿ ಗಳು ಇಂದು ಒಪ್ಪುತ್ತಿದ್ದಾರೆ. ದೈತ ಸಿದ್ಧಾಂತ. ವಿಶಿಷ್ಟ ವಾದ ಮತ್ತು ಜಗತ್ತಿಗೆ ಉಪ ಯುಕ್ತವಾದುದು. ಜಗತ್ತಿಗೆ ಮಾನ್ಯ ವಾದ ಸಂಸ್ಕರಿಸಿದ, ಸಮರ್ಥ ವೇದಾಂತ ಮಧ್ವಾ ಚಾರ್ಯರ ಸಿದ್ಧಾಂತ ಎಂದರು. 

​ಗೌರವ ಡಾಕ್ಟರೇಟ್ ಪ್ರದಾನ: ಆಫ್ರಿಕಾದ ಮೈಲ್ಸ್ ಲೀಡರ್‌ಶಿಪ್ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಕೆ. ರವಿ ಆಚಾರ್ಯ ಅವರು ವಿ.ವಿ.ಯ ಪರವಾಗಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸುಬ್ರಹ್ಮಣ್ಯ ರಾವ್, ಓಂಪ್ರಕಾಶ್ ಭಟ್ ಅವರು ಸಂಪಾದಿಸಿರುವ ‘ವಿಶ್ವಮಾನ್ಯ ಯತಿಯ ಯಶೋಗಾಥೆ’ ಪುಸ್ತಕ ಬಿಡುಗಡೆ ನಡೆಯಿತು. ಅನಂತರ ಭಕ್ತ ವೃಂದ ದಿಂದ ಪುತ್ತಿಗೆ ಶ್ರೀ ಪಾದರಿಗೆ ಗುರುವಂದನೆ ಸಲ್ಲಿಸಲಾಯಿತು.

ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀ ಪಾದರು ಆಶೀರ್ವಚನ ನೀಡಿ, ಜನ್ಮ ದಿನಾಚರಣೆಗಳನ್ನು ನಮ್ಮ ಸಂಸ್ಕೃತಿ,​ ಆಚಾರ-ವಿಚಾರದಂತೆ ನಡೆಸಬೇಕು. ಮಕ್ಕಳಿಂದ ದೀಪ ಆರಿಸಿ, ಅವರ ಕೈಗೆ ಚಾಕು ಕೊಟ್ಟು ಆಚರಿಸ ಬಾರದು. ಭಗವದ್ಗೀತೆ ಇನ್ನು ಮುಂದೆ ವಿಶ್ವಗೀತೆ ಯಾಗಲಿ ಎಂದು ಹರಸಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶ್ರೀಕೃಷ್ಣ ಮಠವು ಪ್ರೀತಿಯ ತೋಟವೂ ಆಗುತ್ತಿದೆ ಎಂದರು.​ 
ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ​ಮಾಹೆ ವಿ.ವಿ. ಸಹಕುಲಾ ಧಿಪತಿ ಡಾ। ​ಎಚ್ ಎಸ್ ಬಲ್ಲಾಳ್ ಸಂಸ್ಕೃತ ವಿ.ವಿ.ಯ ಡಾ| ಶ್ರೀನಿವಾಸ ವರಖೇಡಿ, ಬೆಂಗಳೂರಿನ ತಥಾಗತ್ ಹೃದಯ ಆಸ್ಪತ್ರೆಯ ಡಾ| ಮಹಂತೇಶ ಆರ್. ಚರಂತಿಮಠ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಶತಾವಧಾನಿ ಡಾ। ರಮಾನಾಥ ಆಚಾರ್ಯ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಸುಜೇಂದ್ರ ಉಪಸ್ಥಿತರಿದ್ದರು. ಮಾಹೆ ​ವಿ.ವಿ  ಶರತ್  ಕೆ. ರಾವ್ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ ನಿರೂಪಿಸಿದರು.

No Comments

Leave A Comment