ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿಯಲ್ಲಿ ತೆ೦ಗಿನಕಾಯಿಬರ-ಕಾಯಿಗಾಗಿ ಗ್ರಾಹಕರಿ೦ದ ಅ೦ಗಡಿ-ಅ೦ಗಡಿ ಪರದಾಟ-ಇದುವೇ ಮೊದಲಬಾರಿ-ಕೃತಕವೋ!

ಕರ್ನಾಟಕದ ಕರಾವಳಿ ಸೇರಿದ೦ತೆ ಕೇರಳವು ತೆ೦ಗಿನಕಾಯಿ ಬೆಳೆಸುವಲ್ಲಿ ಬಹಳ ಮು೦ದುವರಿದ ರಾಜ್ಯಗಳಾಗಿದ್ದು ಇದೀಗ ಈ ಬಾರಿ ತೆ೦ಗಿನಕಾಯಿ ಮಾರುಕಟ್ಟೆಯಲ್ಲಿ ದೊರಕದ೦ತಹ ಘೋರದುರ೦ತ ಸ೦ಭವಿಸಿದೆ.

ಉಡುಪಿಯಲ್ಲಿ ಬೇಕಾದಷ್ಟು ತೆ೦ಗಿನಕಾಯಿ ಪಸಲಿದ್ದರೂ ಮಾರುಕಟ್ಟೆಯಲ್ಲಿ ತೆ೦ಗಿನಕಾಯಿಯೇ ಇಲ್ಲದ೦ತಹ ಪರಿಸ್ಥಿತಿ ಉದ್ಬವಿಸಿದೆ. ತೆ೦ಗಿನಕಾಯಿಗಾಗಿ ಗ್ರಾಹಕರು ಪರದಾಡುವ೦ತ ವಾತಾವರಣ ನಿರ್ಮಾಣವಾಗಿ ತೆ೦ಗಿನಕಾಯಿ ಬೆಳೆ ಇರುವ ಕರಾವಳಿಯಲ್ಲಿ ಅದರಲ್ಲೂ ಉಡುಪಿಯಲ್ಲಿ ತೆ೦ಗಿನಕಾಯಿ ಬರ ಎ೦ದಾದರೆ ಮು೦ದಿನ ದಿನಗಳಲ್ಲಿ ಬರುವ ಬಹುದೊಡ್ಡ ಹಬ್ಬವಾದ ಶ್ರೀಗಣೇಶ ಚತುರ್ಥಿಯ ಹಬ್ಬದ ಕಥೆ ಏನಾಗ ಬಹುದೆ೦ಬ ಬಹುದೊಡ್ಡ ಯಕ್ಷಪ್ರಶ್ನೆ ಜಿಲ್ಲೆಯಲ್ಲಿ ಸವಾಲಾಗಿ ಎದ್ದು ನಿ೦ತಿದೆ.

ತೆ೦ಗಿನಕಾಯಿಯನ್ನು ಬೆಳೆಗಾರರಿ೦ದ ಖರೀದಿಸಿ ಮಾರುಕಟ್ಟೆಯಲ್ಲಿ ದುಪ್ಪಟ್ಟುದರಕ್ಕೆ ಮಾರಟಮಾಡಲು ಮು೦ದಾಗಿದ್ದಾರೆ೦ಬ ಬಹುದೊಡ್ಡ ಆರೋಪವೊ೦ದು ಕೇಳಿಬರುತ್ತಿದೆ.

ಹಬ್ಬದ ಸಮಯಲ್ಲಿ ಈ ರೀತಿಯಾಗಿ ತೆ೦ಗಿನಕಾಯಿ ಬರ ಇದೇ ಮೊದಲ ಬಾರಿಯಾಗಿದೆ. ದೇವಾಲಯಗಳ ನಾಡದ ಉಡುಪಿಯಲ್ಲಿ ಎಲ್ಲರೂ ಆಶ್ಚರ್ಯ ಪಡುವ೦ತೆಮಾಡಿದೆ.

ಗ್ರಾಹಕರಾದ ಮಹೇಶ್ ನಾಯಕ್ ಪೆರ೦ಪಳ್ಳಿರವರು ತೆ೦ಗಿನ ಬೇಕಾದಷ್ಟು ಇದೆ ಅದರೆ ದರ ಹೆಚ್ಚಿದ ಕಾರಣ ಖರೀದಿದಾರರು ತೆ೦ಗಿನ ಕಾಯಿಯನ್ನು ಖರೀದಿಸುತ್ತಿಲ್ಲ ಮಾತ್ರವಲ್ಲದೇ ಮಾರಟ ಮಾಡುವಾಗ ಗ್ರಾಹಕರು ದರದ ಬಗ್ಗೆ ಚರ್ಚೆಮಾಡುತ್ತಾರೆ೦ಬ ಉದ್ದೇಶವಾಗಿದೆ ಎ೦ದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಮಸ್ತ ಉಡುಪಿಯ ಜನರಲ್ಲಿ ನಮ್ಮ ಕರಾವಳಿಕಿರಣ ಡಾಟ್ ಕಾ೦ನ ಒ೦ದು ವಿನ೦ತಿ ಹಬ್ಬಕ್ಕೆ ಬೇಕಾಗುವ ತೆ೦ಗಿನಕಾಯಿಯನ್ನು ಇ೦ದಿನಿ೦ದ ಸ೦ಗ್ರಹಿಸಿ ರಕ್ಷಿಸಿ.

No Comments

Leave A Comment