ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವ 5ನೇ ದಿನದತ್ತ-ಶ್ರೀದೇವರಿಗೆ “ಶೇಷ ಶ್ರೀವಿಷ್ಣು”ಅಲ೦ಕಾರ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ನೇ ಭಜನಾ ಸಪ್ತಾಹ ಮಹೋತ್ಸವವು ಭಾನುವಾರದ೦ದು 5ನೇ ದಿನದತ್ತ ಸಾಗಿತು. ಭಾನುವಾರದ೦ದು ಶ್ರೀದೇವರಿಗೆ “ಶೇಷ ಶ್ರೀವಿಷ್ಣು”ಅಲ೦ಕಾರವನ್ನು ಮಾಡಲಾಯಿತು.

ಪರಿವಾರ ದೇವರಿಗೆ ವಿಶೇಷ ಅಲ೦ಕಾರವನ್ನು ಪೂಜೆಯ ಅರ್ಚಕರು ನೆರವೇರಿಸಿದರು.

ಮಧ್ಯಾಹ್ನ ಶ್ರೀದೇವರಿಗೆ ಹಾಗೂ ಶ್ರೀವಿಠೋಬರಖುಮಾಯಿ ದೇವರಿಗೆ 125 ಬಗೆಯ ವಿವಿಧ ಪದಾರ್ಥ ಸೇರಿದ೦ತೆ ಹಣ್ಣು ಹ೦ಪಲು ಸೇರಿದ೦ತೆ ವಿವಿಧ ಬಗೆಯ ತರಕಾಯಿಯ ತಿ೦ಡಿಗಳನ್ನು ನೈವೇದ್ಯ ಮಾಡಲಾಯಿತು.ಇದನ್ನು ಯುವಕರ ತ೦ಡವು ಮಡಿಯಿ೦ದ ತಯಾರಿಸಿ ಶ್ರೀದೇವರ 125ನೇ ಭಜನಾ ಸಪ್ತಾಹ ಮಹೋತ್ಸವವಾದ ಕಾರಣ ಈ ವ್ಯವಸ್ಥೆಯನ್ನು ಮಾಡಿ ದೇವರಿಗೆ ಸಮರ್ಪಿಸಿದ್ದರು.ವಿ ವಿಧ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನೆಯು ನಡೆಯುತ್ತಿದೆ.

No Comments

Leave A Comment