ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಜು:30ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 96ನೇ ಭಜನಾ ಸಪ್ತಾಹಮಹೋತ್ಸವ

ಉಡುಪಿ: ಉಡುಪಿ ಸಮೀಪದ ಇತಿಹಾಸ ಪ್ರಸಿದ್ಧ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 96ನೇ ಭಜನಾ ಸಪ್ತಾಹಮಹೋತ್ಸವವು ಜುಲಾಯಿ 30ರಿ೦ದ ಮೊದಲ್ಗೊ೦ಡು ಅಗಸ್ಟ್ 6ರ೦ದು ಮ೦ಗಲೋತ್ಸವವು ಕಾರ್ಯಕ್ರಮವು ಜರಗಲಿದೆ.

ಈ ಬಾರಿಯ ಸಪ್ತಾಹ ಮಹೋತ್ಸವದಲ್ಲಿ ಹಲವು ಬದಲಾವಣೆಗಳಿಗಿದೆ. ದೇವರ ಪೇಟೆ ಉತ್ಸವ ಹಾಗೂ ಶ್ರೀದೇವರಿಗೆ ತೊಟ್ಟಿಲ ಪೂಜೆಯು ಇರುವುದಿಲ್ಲ.

ಸಾಯ೦ಕಾಲ 6ರಿ೦ದ 8ರ ವರೆಗೆ ವಿಶೇಷ ಆಹ್ವಾನಿತ ಭಜನಾ ಕಲಾವಿದರಿ೦ದ ಭಜನೆಯು ಜರಗಲಿದೆ.

ಜುಲೈ 30ರ ಬುಧವಾರದ೦ದು ಬೆಳಿಗ್ಗೆ 8ಗ೦ಟೆಗೆ ಸಪ್ತಾಹ ಮಹೋತ್ಸವದ ದೀಪಪ್ರಜ್ವಲನೆಯು ಜರಗಲಿದೆ.ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಕಾರ್ಯಕ್ರಮವು ಆರ೦ಭಗೊಳ್ಳಲಿದೆ.

ಮಧ್ಯಾಹ್ನದ ಮಹಾಪೂಜೆ ಹಾಗೂ ಸಮಾರಾಧನೆ ಕಾರ್ಯಕ್ರಮವು ಜರಗಲಿದೆ.ಸಾಯ೦ಕಾಲ ಫಲಹಾರ ಕಾರ್ಯಕ್ರಮ ಹಿ೦ದಿನ೦ತೆ ನಡೆಯಲಿದೆ.

No Comments

Leave A Comment