ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಕುಂಬಳಕಾಯಿ ಯಾರು ಕದ್ದಿದ್ದಾರೆ ಎಂಬುದಕ್ಕೆ ಒಬ್ಬ ತನ್ನ ಹೆಗಲನ್ನು ಮುಟ್ಟಿಕೊಂಡಿದ್ದಾನೆ ಎಂಬ ಗಾದೆ ಮಾತಿನಂತೆ ಮಾಜಿ ಸಚಿವ ಸುನಿಲ್ ಕುಮಾರ್ ರವರ ಪರಿಸ್ಥಿತಿ; ಸುರೇಶ್ ಶೆಟ್ಟಿ ಬನ್ನಂಜೆ.

ಉಡುಪಿ:ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ ಪರಶುರಾಮನ ಮೂರ್ತಿಯು ಕಂಚಿನದು ಅಲ್ಲನಕಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ .ನಕಲಿ ಮೂರ್ತಿಯ ಸೃಷ್ಟಿಕರ್ತರೆ ಇದುವರೆಗೂ ತಾವು ಮಾಡಿದ್ದೆ ಸರಿ ಎಂಬಂತೆ ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ತನಿಕೆಯಲ್ಲಿ ಅದು ಕಂಚಿನ ಮೂರ್ತಿಯಲ್ಲ ಎಂಬುದು ಸಾಬೀತಾಗಿರುತ್ತದೆ. ಅಂದರೆ ಇವರು ನಮಗೆ ಮೋಸ ಮಾಡಿದ್ದು ಇದು ಜಗಜ್ಜಾ ಹಿರವಾಗಿದೆ .

ಅದನ್ನು ಪುನಃ ಮರೆಮಾಚಲು ಇದರ ವಿರುದ್ಧ ಯಾರು ಮಾತನಾಡುತ್ತಾರೆ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಬಿಜೆಪಿಯವರು ಮನವಿ ಮಾಡಿರುತ್ತಾರೆ .ಇದು ದೊಡ್ಡ ಜೋಕ್. ಡೋಂಗಿ ಮಾಡುವುದು ಜನರಿಗೆ ಮೋಸ ಮಾಡುವುದು ನಂತರದ ದಿನಗಳಲ್ಲಿ ಕೋರ್ಟಿಗೆ ಪೊಲೀಸ್ ಸ್ಟೇಷನ್ ಗೆ ಹಾಗೂ ತಾಸಿಲ್ದಾರ್ ಕಚೇರಿಗೆ ಭೇಟಿ ನೀಡಿ ನಮ್ಮ ವಿರುದ್ಧ ಯಾರು ಹೇಳಿಕೆ ನೀಡುತ್ತಾರೆ ಅವರ ಮೇಲೆ ಕೇಸು ದಾಖಲಿಸಿ ಎಂದು ದೌರ್ಜನ್ಯ ನಡೆಸುವುದು ಎಲ್ಲ ಬಿಜೆಪಿ ನಾಯಕರಿಗೆ ಚಾಳಿ ಯಾಗಿ ಹೋಗಿದೆ .

ನಮ್ಮ ಜಿಲ್ಲಾಧಿಕಾರಿಯವರು ಇದನ್ನು ಯಾವುದನ್ನು ಲೆಕ್ಕಿಸದೆ ಸೂಕ್ತವಾದ ನ್ಯಾಯವನ್ನು ಉಡುಪಿ ಜಿಲ್ಲೆಯ ಜನತೆಗೆ ತಿಳಿಸಬೇಕಾಗಿದೆ.
ಮೂರ್ತಿ ಕಂಚಿನದು ಅಲ್ಲ ಎಂದು ಸಾಬೀತಾಗಿರುವಾಗ ಈ ಬಿಜೆಪಿಯ ಯಾವ ನಾಯಕರಿಗೂ ಅದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ .

ಇದು ಪರಶುರಾಮನ ಹೆಸರಿನಲ್ಲಿ ಉಡುಪಿಯ ಜಿಲ್ಲೆಯ ಜನತೆಗೆ ಮಾಡಿದ ಮೋಸ ಹಾಗೂ ಲೂಟಿ. ಎಂದು ಸಾಬೀತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿ ನಗರಸಭೆಯ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಈ ಬಗ್ಗೆ ಪ್ರತಿಕ್ರಿಯೆ ಸುರುತ್ತಾರೆ.

No Comments

Leave A Comment