ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ
ನವದೆಹಲಿ: ಜುಲೈ 18: ಭಾರತದ ರಕ್ಷಣಾ ಕ್ಷೇತ್ರದಲ್ಲಿ (Indian defense) ಚಟುವಟಿಕೆ ತೀವ್ರ ಹಂತಕ್ಕೆ ಹೋಗಿದೆ. ಅದರಲ್ಲೂ ಆಪರೇಷನ್ ಸಿಂದೂರದ ಬಳಿಕ ಸರ್ಕಾರವು ತನ್ನ ಡಿಫೆನ್ಸ್ ಪ್ರಾಜೆಕ್ಟ್ಗಳೆಲ್ಲವನ್ನೂ ಅವಧಿಗೆ ಮುನ್ನ ಮುಗಿಸುವತ್ತ ಗಮನ ಕೊಟ್ಟಿದೆ. ಅಮೆರಿಕದ, ರಷ್ಯಾ, ಚೀನಾದ ರಕ್ಷಣಾ ಸಾಮರ್ಥ್ಯಕ್ಕೆ ಸಮೀಪ ಹೋಗಲು ಯತ್ನಿಸುತ್ತಿದೆ. ಇದೇ ವೇಳೆ, ಈ ವಾರ ಎರಡು ಪ್ರಮುಖ ಕ್ಷಿಪಣಿ ಪರೀಕ್ಷೆಗಳಾಗಿವೆ. ಮೊನ್ನೆ ಡಿಆರ್ಡಿಒ ಸಂಸ್ಥೆ ಆಕಾಶ್ ಪ್ರೈಮ್ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದೆ. ಮೂರ್ನಾಲ್ಕು ದಿನಗಳ ಹಿಂದೆ ಹೈಪರ್ಸಾನಿಕ್ ಕ್ರ್ಯೂಸ್ ಮಿಸೈಲ್ವೊಂದರ (Hypersonic cruise missile) ಸಣ್ಣ ಪರೀಕ್ಷೆಯನ್ನೂ ಯಶಸ್ವಿಯಾಗಿ ಮಾಡಿದೆ.
ಬ್ರಹ್ಮೋಸ್ಗಿಂತ ಮೂರು ಪಟ್ಟು ವೇಗ…
ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಡಿಆರ್ಡಿಒ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದು ಈಗಿರುವ ಬ್ರಹ್ಮೋಸ್ ಕ್ಷಿಪಣಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಹೋಗಬಲ್ಲುದು. ಭಾರತದ ಮೊದಲ ಹೈಪರ್ಸಾನಿಕ್ ಮಿಸೈಲ್ ಇದು. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದು.
ಬ್ರಹ್ಮೋಸ್-2 ಎಂದೇ ಕೆಲವರು ಕರೆಯುತ್ತಿರುವ ಭಾರತದ ಈ ಹೊಸ ಕ್ಷಿಪಣಿ ಮುಂದಿನ ವರ್ಷ ಸೇನೆಗೆ ನಿಯೋಜನೆಯಾಗಬಹುದು. ಕ್ಷಿಪಣಿ ವೇಗವನ್ನು ಮ್ಯಾಚ್ ಮಾಪನದಲ್ಲಿ ಅಳೆಯಲಾಗುತ್ತದೆ. ಮ್ಯಾಚ್-5ಕ್ಕಿಂತ ಹೆಚ್ಚಿದ್ದರೆ ಅದು ಹೈಪರ್ಸಾನಿಕ್. ಮ್ಯಾಚ್ ಎಂದರೆ ಇಲ್ಲಿ ಶಬ್ದದ ವೇಗ. ಒಂದು ಮ್ಯಾಚ್ ಎಂದರೆ ಗಂಟೆಗೆ ಸುಮಾರು 1,235 ಕಿಮೀ ಆಗುತ್ತದೆ. ಭಾರತದ ಹೊಸ ಕ್ಷಿಪಣಿಯು ಮ್ಯಾಚ್-8 ವೇಗದ್ದಾಗಿದೆ ಎನ್ನಲಾಗಿದೆ.
ಈ ಕ್ಷಿಪಣಿಗೆ ಸ್ಕ್ರಾಮ್ಜೆಟ್ ಎಂಜಿನ್ನ ಶಕ್ತಿ ಇದೆ. ವಾತಾವರಣದ ಗಾಳಿಯನ್ನೇ ಇದು ಶಕ್ತಿಯಾಗಿ ಮಾಡಿಕೊಳ್ಳಲಿದೆ. ಇದು 1,500-2,500 ಕಿಮೀ ದೂರ ಕ್ರಮಿಸಬಲ್ಲುದು. ಒಂದೇ ಒಂದು ಸೆಕೆಂಡ್ನಲ್ಲಿ ಇದು 2.75 ಕಿಮೀ ದೂರ ಹೋಗಬಲ್ಲುದು. ಪಾಕಿಸ್ತಾನದ ಪರಮಾಣು ನೆಲೆ ಇರುವ ನೂರ್ ಖಾನ್ ಬೇಸ್ ಅನ್ನು ಇದು ಕೇವಲ ಮೂರೇ ನಿಮಿಷದಲ್ಲಿ ತಲುಪಿ ಉಡಾಯಿಸಬಲ್ಲುದು.
ಅಮೆರಿಕ, ಚೀನಾ, ರಷ್ಯಾ ಸಾಲಿಗೆ ಭಾರತ
ರಷ್ಯಾದ ಏವನ್ಗಾರ್ಡ್ ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಎನ್ನಲಾಗುತ್ತಿದೆ. ಇದಿನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದರ ವೇಗ ಮ್ಯಾಚ್ 20 ಎನ್ನಲಾಗುತ್ತಿದೆ. ಅಂದರೆ, ಒಂದು ಸೆಕೆಂಡ್ಗೆ ಇದು 6.8 ಕಿಮೀ ವೇಗದಲ್ಲಿ ಹೋಗಬಲ್ಲುದು. ಬರೋಬ್ಬರಿ 6,000 ಕಿಮೀ ದೂರ ಸಾಗುವ ಇದು ಕೆಲವೇ ನಿಮಿಷದಲ್ಲಿ ಅಮೆರಿಕವನ್ನು ತಲುಪಿ ಗುರಿಯನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.
ಚೀನಾದ ಡಾಂಗ್ ಫೆಂಗ್, ಅಮೆರಿಕದ ಟ್ರೈಡೆಂಟ್-2, ಮೈನೂಟ್ಮ್ಯಾನ್-3, ರಷ್ಯಾದ ಸರ್ಮಟ್, ಕಿಂಝಲ್ ಮೊದಲಾದ ಕ್ಷಿಪಣಿಗಳು ಅತ್ಯಂತ ವೇಗದ ಮಿಸೈಲ್ಗಳೆಂದು ಹೆಸರಾಗಿವೆ.