ಚಲಿಸುತ್ತಿರುವಸ್ಲೀಪರ್ ಬಸ್ಸಿನಲ್ಲಿಆಕೆಮಗುವಿಗೆಜನ್ಮನೀಡಿದ್ದಾಳೆ, ಪತಿ ಎಂದು ಹೇಳಿಕೊಂಡ ವ್ಯಕ್ತಿಯ ಸಹಾಯದಿಂದ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಶಿಶು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದೆ.
ಮಂಗಳವಾರ ಬೆಳಗ್ಗೆ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಯುವತಿಮತ್ತು ಆಕೆಯ ಸಹಚರರು ಸಂತ ಪ್ರಯಾಗ್ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದರು.ಪ್ರಯಾಣದ ಸಮಯದಲ್ಲಿ, ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನೊಳಗೆ ಮಗುವಿಗೆ ಜನ್ಮ ನೀಡಿದರು. ಅವರ ಜೊತೆ ಆಕೆಯ ಪತಿ ಎಂದು ಹೇಳಿಕೊಂಡ ಅಲ್ತಾಫ್ ಶೇಖ್ ಕೂಡ ಇದ್ದ.
ಹೆರಿಗೆಯಾದ ಸ್ವಲ್ಪ ಸಮಯದ ನಂತರ, ದಂಪತಿ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ. ಆರಂಭದಲ್ಲಿ, ಬಸ್ ಪ್ರಯಾಣದಿಂದ ಮಹಿಳೆ ವಾಂತಿ ಮಾಡಿಕೊಂಡಿದ್ದಾಳೆ ಎಂದು ಅವರು ಇತರ ಪ್ರಯಾಣಿಕರು ಮತ್ತು ಬಸ್ ಚಾಲಕರಿಗೆ ತಿಳಿಸಿದರು.ಬಸ್ಸಿನ ಹಿಂದೆ ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಸವಾರನೊಬ್ಬ ಕಿಟಕಿಯಿಂದ ಅನುಮಾನಾಸ್ಪದವಾಗಿ ಏನೋಎಸೆದಿರುವುದನ್ನುಗಮನಿಸಿದ್ದಾರೆ.
ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ಕಂಡು ಆಘಾತಕ್ಕೊಳಗಾಗಿ ತಕ್ಷಣ ತುರ್ತು ಸಹಾಯವಾಣಿ (112) ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳೀಯ ಪೊಲೀಸ್ ಗಸ್ತು ತಂಡವು ಬಸ್ ಅನ್ನು ತಡೆದು ಪ್ರಾಥಮಿಕ ವಿಚಾರಣೆಯ ನಂತರ ದಂಪತಿಯನ್ನು ಬಂಧಿಸಿತು. ವಿಚಾರಣೆಯಸಮಯದಲ್ಲಿ, ಮಗುವನ್ನುಬೆಳೆಸಲುತಮಗೆಸಾಧ್ಯವಿಲ್ಲಎಂದುಹೇಳಿಮಗುವನ್ನುಎಸೆದಿದ್ದಾಗಿ ಇಬ್ಬರೂ ಒಪ್ಪಿಕೊಂಡರು. ಚಲಿಸುವ ಬಸ್ಸಿನಿಂದ ಬಿದ್ದ ಪರಿಣಾಮ ಶಿಶು ಸಾವನ್ನಪ್ಪಿದೆ.
ದಂಪತಿಪತಿ-ಪತ್ನಿ ಎಂದು ಹೇಳಿಕೊಂಡು ಕಳೆದ ಒಂದೂವರೆ ವರ್ಷಗಳಿಂದ ಪುಣೆಯಲ್ಲಿ ವಾಸಿಸುತ್ತಿದ್ದರುಆದರೆವೈವಾಹಿಕಸ್ಥಿತಿಯನ್ನುದೃಢೀಕರಿಸುವಯಾವುದೇದಾಖಲೆಯನ್ನುಅವರಿಗೆಪ್ರಸ್ತುತಪಡಿಸಲುಸಾಧ್ಯವಾಗಿಲ್ಲ. ಘಟನೆಯನಂತರಮಹಿಳೆಯನ್ನುಪೊಲೀಸರುವೈದ್ಯಕೀಯಚಿಕಿತ್ಸೆಗಾಗಿಆಸ್ಪತ್ರೆಗೆಕರೆದೊಯ್ದಿದ್ದಾರೆ.