ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಭಾರೀ ಮಳೆಯ ನಡುವೆಯೂ ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಅದ್ದೂರಿಯ ಕಟ್ಟಿಗೆ ಮುಹೂರ್ತ ಸ೦ಪನ್ನ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭಾನುವಾರ (ಜುಲಾಯಿ 13)ದ೦ದು ಅದ್ದೂರಿಯಿ೦ದ ಕಟ್ಟಿಗೆ ಮುಹೂರ್ತ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು.
ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನೆರವೇರಿಸಲಾಗಿದ್ದು ಬಾರಿಯ ಕಟ್ಟಿಗೆ ಮುಹೂರ್ತವು ಜುಲೈ 13ರಂದು ಬೆಳಿಗ್ಗೆ 9.15 ರ ಸಿಂಹ ಲಗ್ನದಲ್ಲಿ ನಡೆಯಿತು.
ಇದಕ್ಕೂ ಮುನ್ನ ಮಠದ ಪುರೋಹಿತರು ನಿಗದಿಪಡಿಸಿದ ದಿನದಂದು ಕಟ್ಟಿಗೆ ಪೇರಿಸಿಡುವ ಜಾಗದಲ್ಲಿ ನಡುಗಂಬವನ್ನು ನೆಟ್ಟು ಅದರ ಸಮ್ಮುಖದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಬೆಳಿಗ್ಗೆ 7.30ಕ್ಕೆ ಶಿರೂರು ಮಠದಲ್ಲಿ ನವಗ್ರಹ ಇತ್ಯಾದಿ ಪ್ರಾರ್ಥನೆಯೊಂದಿಗೆ ವಿವಿಧ ಗಣ್ಯರು, ವಿದ್ವಾಂಸರು, ದಿವಾನರು, ಮತ್ತು ಭಕ್ತರ ಸಹಿತವಾಗಿ ಚಂದ್ರಮೌಳೀಶ್ವರ, ಶ್ರೀಆನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ಮಧ್ಯಗುರುಗಳ ಹಾಗೂ ಗರುಡನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ನಿಗದಿಪಡಿಸಿದ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ವೇದಘೋಷ, ಕೊಂಬು, ಕಹಳೆ, ವಾದ್ಯ ಬಿರುದಾವಳಿಯ ಜೊತೆಯಲ್ಲಿ ಮಠದ ಪರಿಚಾರಕರು, ಭಕ್ತಾದಿಗಳು ಕಲ್ಸಂಕದ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಭಕ್ತರು ತಮ್ಮ ಕೈಯಲ್ಲಿ ಹಾಗೂಗೈಗಾಡಿ,ಎತ್ತಿನಗಾಡಿಯಲ್ಲಿ ಕಟ್ಟಿಗೆಯನ್ನು ಇಟ್ಟು ಮೆರವಣಿಗೆಯಲ್ಲಿ ರಥಬೀದಿಗೆ ಬರಲಾಯಿತು.
ನ೦ತರ ಮಧ್ವ ಸರೋವರದ ಈಶಾನ್ಯ ಮೂಲೆಯಲ್ಲಿ ಸುಮಾರು 50 ಅಡಿ ಎತ್ತರ 25 ಅಡಿ ಅಗಲದ ಕಲಾತ್ಮಕವಾದ ರಥದ ಮಾದರಿಯಲ್ಲಿ ಕಟ್ಟಿಗೆಯನ್ನು ಪೇರಿಸಿಡವು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಪರ್ಯಾಯ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು,ಕಿರಿಯಯತಿಗಳಾದ ಸುಶ್ರೀ೦ದ್ರ ತೀರ್ಥಶ್ರೀಪಾದರು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಕಟ್ಟಿಗೆಮುಹೂರ್ತಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನ೦ತರ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯನ್ನು ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರು ಗಣ್ಯರ ಉಪಸ್ಥಿತಿಯಲ್ಲಿ ದೀಪಪ್ರಜ್ವಲಿಸುವುದರೊ೦ದಿಗೆ ಉದ್ಘಾಟಿಸಿದರು.
ಶಾಸಕ ಯಶ್ಪಾಲ್ ಸುವರ್ಣ,ಬೈ೦ದೂರು ಶಾಸಕ ಗುರುರಾಜ್ ಗ೦ಟಿಹೊಳೆ,ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ,ಉಪಾಧ್ಯಕ್ಷರಾದ ಮಟ್ಟಾರು ಹೆಗ್ಡೆ, ಪ್ರಮುಖರಾದ ಜಯಕರ ಶೆಟ್ಟಿ ಇ೦ದ್ರಾಳಿ, ಪ್ರಸಾದ್ ರಾಜ್ ಕಾ೦ಚನ್,ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಉಡುಪಿ ಬ್ಲಾಕ್ ಕಾ೦ಗ್ರೆಸ್ ನ ಅಧ್ಯಕ್ಷರು ಹಾಗೂ ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾ೦ಚನ್,ವೀಣಾ ಶೆಟ್ಟಿ, ಮೋಹನ್ ಭಟ್,ಎ೦.ಬಿ.ಪುರಾಣಿಕ್, ಮಠದ ದಿವಾನರಾದ ಉದಯ ಸರಳತ್ತಾಯ ಹಾಗೂ ಶ್ರೀಶ ಭಟ್ ಕಡೆಕಾರ್ ಸೇರಿದ೦ತೆ ಸಾವಿರಾರು ಮ೦ದಿ ಮಠದ ಅಭಿಮಾನಿಗಳು ಶಿಷ್ಯವೃ೦ದದವರು ಹಾಜರಿದ್ದರು.