ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಸರಕಾರಿ ಶಾಳೆಯಲ್ಲಿ ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ PM POSHAN ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು
ಉಡುಪಿ: ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ PM POSHAN ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಬುಧವಾರದ೦ದು ಉಡುಪಿಯ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿ ಜರುಗಿತು.
ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ PM POSHAN ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು ಉಂಟು ಮಾಡುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀಮತಿ ಯಲ್ಲಮ್ಮ, ಹಾಗೂ DIET ಉಪನ್ಯಾಸಕರಾದ ಶ್ರೀಯುತ ಯೋಗ ನರಸಿಂಹ ಸ್ವಾಮಿ ಸರಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ PM POSHAN ಕಾರ್ಯಕ್ರಮದ ಅಗತ್ಯ ಹಾಗೂ ಯಶಸ್ಸಿನ ಬಗ್ಗೆ ಉತ್ತಮ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ಪ್ರೌಢಶಾಲೆ SDMC ಅಧ್ಯಕ್ಷರಾದ ಶ್ರೀಯುತ ರಮೇಶ್ ಹೆಗಡೆ, ಪುರಸಭೆಯ ಉಪಾಧ್ಯಕ್ಷೆ ಶ್ರೀಮತಿ ರಜನಿ ಹೆಬ್ಬಾರ್ ಮತ್ತು ಪುರಸಭೆ ಸದಸ್ಯರಾದ ಶ್ರೀಮತಿ ಮಾನಸ ಪೈ, ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಕುಸುಮ ರವರು, ಪ್ರಾಥಮಿಕ ಶಾಲಾ SDMC ಅಧ್ಯಕ್ಷರಾದ ಡಾಕ್ಟರ್ ವಿರೂಪಾಕ್ಷ ಹಾಗೂ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಯುತ ನಾಗೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಜಿಮ್ ಪ್ರೇಮ್‍ಜಿ ಫೌಂಡೇಷನ್ ನ ಶ್ರೀಯುತ ಯೋಗೀಶ್ ಹಾಗೂ ಕುಮಾರಿ ಪ್ರಕೃತಿ ಆಗಮಿಸಿದ್ದು, ಪೋಷಕರು ಹಾಗೂ SDMC ಸದಸ್ಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಸಮೀಕ್ಷೆ ಕೈ ಗೊಂಡರು.BRP ಜಯಶೀಲ ಬಿ ರೋಟೆ ಕಾರ್ಯಕ್ರಮ ಸಂಘಟಿಸಿ, ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, CRP ಸರಿತಾ ರಾಣಿ ವಂದಿಸಿ CRP ರಂಜಿತ ಕಾರ್ಯಕ್ರಮ ನಿರೂಪಿಸಿ, BIERT ಆಶಾ ರವರು ಸಹಕರಿಸಿದರು.