37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...
ದೇಶಕ್ಕಿಂತ ಕ್ರಿಕೆಟ್ ದೊಡ್ಡದಲ್ಲ: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ
ಭಾರತ ಹಾಗೂ ಪಾಕ್ ನಡುವೆ ಯುದ್ಧ ಭೀತಿ ಇರುವುದರಿಂದ 2025ನೇ ಸಾಲಿನ ಐಪಿಎಲ್ನ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಆಗಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಅವರ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ಕ್ರಿಕೆಟ್ಪ್ರೇಮಿಗಳಿಗೆ ಸಾಕಷ್ಟು ನೋವನ್ನು ತಂದಿದೆ.
ಪಂಜಾಬ್ನ ಧರ್ಮಶಾಲಾದಲ್ಲಿ ಈ ವರ್ಷದ 58ನೇ ಪಂದ್ಯ ನಡೆಯುತ್ತಿತ್ತು. 10.1 ಓವರ್ಗೆ ಫ್ಲಡ್ಲೈಟ್ ಸಮಸ್ಯೆ ಆಯಿತು. ಆ ಬಳಿಕ ಭದ್ರತಾ ಕಾರಣದಿಂದ ಮ್ಯಾಚ್ನ ರದ್ದು ಮಾಡಲಾಯಿತು. ಏಕಾಏಕಿ ಎಲ್ಲರನ್ನೂ ಕಳುಹಿಸಲಾಯಿತು.ಇದು ಮುಂದಿನ ಪಂದ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಬಿಸಿಸಿಐ ಇಂದು (ಮೇ 9) ಮಹತ್ವದ ಸಭೆ ನಡೆಸಿ ಪಂದ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಭಾರತ ಹಾಗೂ ಪಾಕ್ ಮಧ್ಯೆ ಯುದ್ಧ ಭೀತಿ ಶುರವಾಗಿದೆ. ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಭಾರತ ಪ್ರತಿ ದಾಳಿ ನಡೆಸಿ ಉಗ್ರರರ ನೆಲೆಯನ್ನು ನಾಶ ಮಾಡಿತು. ಆ ಬಳಿಕ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ಎಲ್ಲಾ ಕಾರಣದಿಂದ ಯುದ್ಧ ಭೀತಿ ಶುರುವಾಗಿದ್ದು, ಬಿಸಿಸಿಐ ಐಪಿಎಲ್ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಈ ಬಾರಿ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿ ಇತ್ತು. ಈ ಮೂಲಕ ಕಪ್ ಗೆಲ್ಲುವ ಕನಸನ್ನು ಕಾಣುತ್ತಿತ್ತು. ಈ ಮೂಲಕ 18 ವರ್ಷಗಳ ಕಪ್ ಗೆಲ್ಲುವ ಕನಸು ನನಸಾಗಲಿದೆ ಎಂದು ಆರ್ಸಿಬಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಐಪಿಎಲ್ ಪಂದ್ಯವೇ ರದ್ದಾಗಿ ಹೋಗಿರುವುದು ಆರ್ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರು ಎರಚಿದಂತೆ ಆಗಿದೆ.