ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಹಾವೇರಿಯಲ್ಲಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 6 ಜನರು ಸ್ಥಳದಲ್ಲೇ ಸಾವು
ಹಾವೇರಿ, ಮೇ 08: ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಜನರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತರ ವಿವರ
ಹರಿಹರ ನಿವಾಸಿ ಫರಾನ್ (27), ರಾಣೆಬೆನ್ನೂರು ನಿವಾಸಿ ಎಮ್ಮಿಶಿಪಾ (16), ಗೋವಾದ ಪಣಜಿ ನಿವಾಸಿಗಳಾದ ಅಲಿಷಾ (20), ಪುಲಖಾನ್ (17) ಮೃತರು. ತಷ್ಕಿನ್ ರಾಣೆಬೆನ್ನೂರು, ಪಿರೋಜ್ ಗಾಯಗೊಂಡವರು. ಮೃತರು ರಾಣೆಬೇನ್ನೂರು ನಗರದ ಬೇಕರಿ ವ್ಯಾಪಾರಿ ಅಶೋಕ್ ಎಂಬುವವರ ಸಂಬಂಧಿಕರ ಮಕ್ಕಳು ಎಂದು ಹೇಳಲಾಗುತ್ತಿದೆ.
ಶಾಲೆ ರಜೆ ಇರುವ ಹಿನ್ನಲೆ ಸಂಬಂಧಿಕರೆಲ್ಲಾ ಸೇರಿ ರಾಣೇಬೆನ್ನೂರಿನಿಂದ ಗೋವಾಕ್ಕೆ ಹೊರಟಿದ್ದರು. ಇಂದು ಅಗಡಿ ತೋಟಕ್ಕೆ ಹೋಗಿ ನಂತರ ಗೋವಾಕ್ಕೆ ಹೋಗುವ ಪ್ಲಾನ್ನಲ್ಲಿದ್ದರು. ಆದರೆ ಅಷ್ಟರಲ್ಲೇ ಜವರಾಯನ ಅಟ್ಟಹಾಸ ಮೆರೆದಿದ್ದಾನೆ. ಜಾಸ್ತಿ ವೇಗ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಕಾರು ಚಾಲಕ ಡಿಕ್ಕಿ ಹೊಡಿದಿದ್ದಾನೆ. ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶವಗಳ ರವಾನೆ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.