ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸಗೊಳಿಸಿದ ಭಾರತೀಯ ಸೇನೆ, 15 ನಗರಗಳ ಮೇಲೆ ಪಾಕ್ ದಾಳಿ ವಿಫಲ!

ನವದೆಹಲಿ: ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ನಡೆಸಲು ಉದ್ದೇಶಿಸಲಾಗಿದ್ದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಅಲರ್ಟ್ ಆಗಿರುವ ಭಾರತೀಯ ಸೇನೆ ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ಪ್ರಕಟಿಸಿದ್ದು ದಾಳಿಯನ್ನು ಖಚಿತಪಡಿಸಿದೆ.

ಪಾಕಿಸ್ತಾನ ಚೀನಾದಿಂದ HQ-9 ಏರ್ ಡಿಫೆನ್ಸ್ ಸಿಸ್ಟಮ್ ನ್ನು ಪಡೆದಿತ್ತು ಈಗ ಈ ವ್ಯವಸ್ಥೆಯನ್ನು ಭಾರತ ಸಂಪೂರ್ಣ ನಾಶ ಮಾಡಿದೆ. ದಾಳಿಯನ್ನು ಪಾಕಿಸ್ತಾನ ಸಹ ಖಚಿತಪಡಿಸಿದ್ದು, ದಾಳಿಯಲ್ಲಿ ನಾಲ್ವರು ಪಾಕಿಸ್ತಾನದ ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ನೆನ್ನೆ ರಾತ್ರಿ ಪಾಕಿಸ್ತಾನ ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಯತ್ನಿಸಿತ್ತು ಈ ದಾಳಿಯನ್ನು ಭಾರತ 9 ಏರ್ ಡಿಫೆನ್ಸ್ ಸಿಸ್ಟಮ್ ನ್ನು ನಾಶ ಮಾಡುವ ಮೂಲಕ ತಡೆಗಟ್ಟಿದೆ.

ಆಪರೇಷನ್ ಸಿಂದೂರ್ ಗೆ ಪ್ರತೀಕಾರ ತೆಗೆದುಕೊಳ್ಳಲು ಮುಂದಾಗಿದ್ದ ಪಾಕಿಸ್ತಾನ ಭಾರತದ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ ಭಟಿಂಡ, ಚಂಡೀಗಢ, ನಲ್ ಫಲೋಡಿ, ಉತ್ತರಲೈ, ಭುಜ್ ನಗರಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಯತ್ನಿಸಿತ್ತು.

No Comments

Leave A Comment