ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಕರಾಚಿ, ಲಾಹೋರ್ ನಲ್ಲಿ ಡ್ರೋನ್ ದಾಳಿ; 26 ಮಂದಿ ಸಾವು, ಪಾಕಿಗಳು ತತ್ತರ
ಇಸ್ಲಾಮಾಬಾದ್: ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು, ಲಾಹೋರ್ ಮತ್ತು ಕರಾಚಿಯಲ್ಲಿ ‘ಆತ್ಮಹತ್ಯಾ ಡ್ರೋನ್’ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.
ಗುರುವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ದೊಡ್ಡ ಸರಣಿ ಸ್ಫೋಟಗಳು ಕೇಳಿ ಬಂದಿದ್ದರಿಂದ ಸೈರನ್‌ಗಳು ಮೊಳಗಲಾರಂಭಿಸಿವೆ. ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಅಜ್ಞಾತ ಸ್ಥಳಗಳಿಂದ ಹಾರಿ ಬಂದ ಆತ್ಮಹತ್ಯಾ ಡ್ರೋನ್ ಗಳು ಕರಾಚಿ ಮತ್ತು ಲಾಹೋರ್ ನ ನಿಗಧಿತ ಪ್ರದೇಶ ಮತ್ತು ಕಟ್ಟಡಗಳಿಗೆ ನುಗ್ಗಿ ಸ್ಫೋಟಗೊಳ್ಳುತ್ತಿವೆ ಎಂದು ವರದಿ ಮಾಡಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮಂಗಳವಾರ ಮುಂಜಾನೆ ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
26 ಮಂದಿ ಸಾವು, ಹಲವರಿಗೆ ಗಾಯ
ಇನ್ನು ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಆತ್ಮಹತ್ಯಾ ಡ್ರೋನ್ ದಾಳಿಯಲ್ಲಿ ಈ ವರೆಗೂ 26 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಈ ಆತ್ಮಹತ್ಯಾ ಡ್ರೋನ್ ದಾಳಿಗಳು ಲಾಹೋರ್ ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ನಡೆದಿವೆ ಎನ್ನಲಾಗಿದೆ.
ವಿಡಿಯೋ ವೈರಲ್
ಈ ಡ್ರೋನ್ ದಾಳಿ ಬೆನ್ನಲ್ಲೇ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವುದನ್ನು ಮತ್ತು ದಾಳಿ ನಡೆದ ಕಟ್ಟಡಗಳಿಂದ ಹೊಗೆ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 5-6 ಅಡಿ ಅಳತೆಯ ಡ್ರೋನ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸ್ ಮೂಲಗಳು ಸಮಾ ಟಿವಿಗೆ ತಿಳಿಸಿವೆ.
12 ಡ್ರೋನ್ ಗಳನ್ನು ಹೊಡೆದುರುಳಿಸಿದ್ದೇವೆ ಎಂದ ಪಾಕ್ ಸೇನೆ
ಇನ್ನು ಡ್ರೋನ್ ದಾಳಿ ನಡೆದ ಈ ಪ್ರದೇಶವು ಲಾಹೋರ್‌ನ ಐಷಾರಾಮಿ ಕೇಂದ್ರ ವ್ಯಾಪಾರ ಜಿಲ್ಲೆ ಮತ್ತು ಲಾಹೋರ್ ಸೇನಾ ಕಂಟೋನ್ಮೆಂಟ್‌ಗೆ ಹೊಂದಿಕೊಂಡಿದೆ. ಸಿಯಾಲ್‌ಕೋಟ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಅಂತೆಯೇ ದಾಳಿ ನಡೆಸಲು ಬಂದ ಡ್ರೋನ್ ಗಳ ಪೈಕಿ ಸುಮಾರು 12 ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿದೆ. ವ್ಯವಸ್ಥೆಯನ್ನು ಜ್ಯಾಮ್ ಮಾಡುವ ಮೂಲಕ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಸಮ್ಮಾ ಟಿವಿಗೆ ಮಾಹಿತಿ ನೀಡಿದೆ. ಆದಾಗ್ಯೂ ಡ್ರೋನ್ ಗಳ ಮೂಲ ಪತ್ತೆ ಮಾಡಲು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇಸ್ರೇಲ್ ನಿರ್ಮಿತ ಹರೋಪ್ ಡ್ರೋನ್ ಗಳು
ಭಾರತವು ಇಸ್ರೇಲಿ ಹರೋಪ್ ಡ್ರೋನ್‌ಗಳನ್ನು ಕರಾಚಿ ಮತ್ತು ಲಾಹೋರ್‌ನ ಎರಡು ದೊಡ್ಡ ನಗರಗಳು ಸೇರಿದಂತೆ ಹಲವು ಸ್ಥಳಗಳಿಗೆ ಕಳುಹಿಸಿದ್ದು, ಅವುಗಳ ಅವಶೇಷಗಳನ್ನು ಸಂಗ್ರಹಿಸಲಾಗುತ್ತಿದೆ. ಪಾಕಿಸ್ತಾನದ ವಾಯುಪ್ರದೇಶಕ್ಕೆ ಭಾರತೀಯ ಡ್ರೋನ್‌ಗಳನ್ನು ಕಳುಹಿಸುವುದನ್ನು ಮುಂದುವರಿಸಲಾಗಿದೆ… ಭಾರತ ಈ ಆಕ್ರಮಣಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಅಹ್ಮದ್ ಷರೀಫ್ ಚೌಧರಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಸೇವೆ ಸ್ಥಗಿತ
ಏತನ್ಮಧ್ಯೆ, ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರವು ಕರಾಚಿ, ಲಾಹೋರ್ ಮತ್ತು ಸಿಯಾಲ್‌ಕೋಟ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.