ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಪಹಲ್ಗಾಮ್ ದಾಳಿ ಖಂಡಿಸಿ ಜರ್ಮನಿಯಲ್ಲಿ ಶಾಂತಿಯುತ ಮೆರವಣಿಗೆ- ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು!
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್ಗಾರ್ಟ್ನಲ್ಲಿ ಭಾರತೀಯ ಸಮುದಾಯವು ಶಾಂತಿಯುತ ಮೆರವಣಿಗೆಯನ್ನು ನಡೆಸಿತು.
ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.
ಸಂಜೆ 5 ಗಂಟೆಗೆ ಭಾರತೀಯ ಸಮುದಾಯದ 300 ಕ್ಕೂ ಹೆಚ್ಚು ಸದಸ್ಯರ ಆಗಮನದೊಂದಿಗೆ ಪ್ರಾರಂಭವಾಯಿತು. ಎಲ್ಲಾ ಭಾರತೀಯರು ಹಣೆಯ ಮೇಲೆ ತಿಲಕವನ್ನು ಹಾಕಿಕೊಂಡಿದ್ದರುಕಾರ್ಯಕ್ರಮದಲ್ಲಿ ಶಾಂತಿ ಮಾರ್ಗ ಹಾಗೂ ಮೃತರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿ ಹನುಮಾನ್ ಚಾಲೀಸಾದ ಸಾಮೂಹಿಕ ಪಠಣವು ನಡೆಯಿತು. ಈ ಮೂಲಕ ಎಲ್ಲರಲ್ಲಿ ಧೈರ್ಯ, ನಂಬಿಕೆ ಮತ್ತು ಏಕತೆಯ ಭಾವವನ್ನು ಮತ್ತೊಮ್ಮೆ ಮೂಡಿಸಿತು.
ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಟಿಆರ್ಎಫ್ ಹೊತ್ತಿತ್ತು. ಈ ದಾಳಿಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸಿದೆ. ಭಯೋತ್ಪಾದಕರ ವಿರುದ್ಧದ ಸಮರಕ್ಕೆ ಜತೆಯಾಗಿ ನಿಂತಿವೆ.