ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಯಾಗಿ ಶತಮಾನಗಳು ಸ್ಮರಣಾರ್ಥ ಧಾರ್ಮಿಕ ಭವನ-ವಸತಿ ನಿಲಯಕ್ಕೆ ಶಿಲಾನ್ಯಾಸ ಲೋಕಾರ್ಪಣೆ

ಉಡುಪಿ:ಉಡುಪಿ ಕ್ಷೇತ್ರದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಯಾಗಿ ಶತಮಾನಗಳು ಗತಿಸುತ್ತಿರುವ ಹಿನ್ನಲೆಯಲ್ಲಿ ಇದರ ಸ್ಮರಣಾರ್ಥ ಧಾರ್ಮಿಕ ಭವನ-ವಸತಿ ನಿಲಯ ಲೋಕಾರ್ಪಣೆ ಮಾಡಲು ನಿಶ್ಚಯಿಸಲಾಗಿದ್ದು ಆ ಪ್ರಯುಕ್ತ ಮೇ 2  ಶುಕ್ರವಾರದ೦ದು ಉಡುಪಿ ಕನಕದಾಸ ರಸ್ತೆ ಸಮೀಪವಿರುವ ಸ್ಥಳದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು .

ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು , ಕಿರಿಯ ಪಟ್ಟದ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಸಮಕ್ಷಮ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.

ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ,ರಾಘವೇ೦ದ್ರ ಮಠದ ಜಯತೀರ್ಥ ಆಚಾರ್ಯರವರು ಸೇರಿದ೦ತೆ ಮಠದ ಅಭಿಮಾನಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

 

No Comments

Leave A Comment