ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಮುಲ್ಕಿ: ಬಪ್ಪನಾಡು ದೇವಸ್ಥಾನದ ರಥೋತ್ಸವದ ವೇಳೆ ಮುರಿದುಬಿದ್ದ ರಥ
ಮುಲ್ಕಿ: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ. ಇದರಿಂದ ಒಬ್ಬರು ಅರ್ಚಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗಿನ ಜಾವ ಸುಮಾರು 1.40 ರಿಂದ 2.00 ಗಂಟೆ ವೇಳೆ ಬ್ರಹ್ಮರಥೋತ್ಸವ ತೇರಿನ ಮೇಲ್ಭಾಗ ಮುರಿದು ಬಿದ್ದಿದೆ. ರಥ ಕುಸಿಯುವ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಆದರೆ ಅದೃಷ್ಟವಶಾತ್ ತೆರಿನಲ್ಲಿದ್ದ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎನ್ನಲಾಗಿದೆ.
ಈ ಘಟನೆಯು ನೆರೆದಿದ್ದ ಭಕ್ತರ ಆತಂಕಕ್ಕೆ ಕಾರಣವಾಯಿತು. ನಂತರ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ನೆರವೇರಿಸಲಾಯಿತು.