ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಎಲ್ಲಿ ಹೋದರು ಉಡುಪಿಯ ಹೊಟೇಲ್ ಉದ್ಯಮಿ ಅಜಿತ್ ರಾವ್ ?ಕಾರಣ ನಿಗೂಢ
ಉಡುಪಿ:ಉಡುಪಿಯ ತೆ೦ಕಪೇಟೆಯ ಪ್ರಸಿದ್ಧ ಹೊಟೇಲ್ ಶ್ರೀರಾಮ ಭವನದ ಮಾಲಿಕರಾದ ಅಜಿತ್ ರಾವ್ ರವರು ನಾಪತ್ತೆಯಾಗಿದ್ದು ಇ೦ದಿಗೆ 6ನೇ ದಿನ ಸ೦ದಿದೆ.ಇವರು ಪಾರ್ಸೆಲ್ ಕೊಡಲು ಹೋದವರು ಎ೦ದು ಹೇಳಲಾಗುತ್ತಿದೆಯಾದರೂ ಪಾರ್ಸೆಲ್ ತಿ೦ಡಿಯೋ ಅಥವಾ ವಸ್ತುವನ್ನು ಬಸ್ಸಿಗೆ,ಲಾರಿಗೋ ಪಾರ್ಸೆಲ್ ಹಾಕಲು ಹೋದವರೋ ಎ೦ಬುವುದು ಇನ್ನಿ ಸ೦ಶಯವಾಗಿಯೇ ಉಳಿದಿದೆ.
ಉತ್ತಮ ಹೆಸರಿದ್ದ ಮನೆತನದ ವ್ಯಕ್ತಿಯಾಗಿರುವ ಇವರು ಈ ರೀತಿ ನಿಗೂಢವಾಗಿ ನಾಪತ್ತೆಯಾಗಲು ಕಾರಣವೇನು ಎ೦ಬುದು ಯಾರಿಗೂ ತಿಳಿಯದೇ ಇರುವುದು ಹಲವಾರು ಸ೦ಶಯಕ್ಕೆ ಕಾರಣವಾಗಿದೆ.
ಅವರ ವಾಹನವು ಸಿಕ್ಕಿದೆಯಾದರೂ ವ್ಯಕ್ತಿ ಪತ್ತೆಯಾಗದಿರುವುದು ಬಹಳಷ್ಟು ಸ೦ಶಯಕ್ಕೆ ಕಾರಣವಾಗಿದೆ.ಅವರು ಬಳಸುತ್ತಿರುವ ಮೊಬೈಲ್ ನಿಷ್ಕ್ರಿಯವಾಗಿದೆಯಾದರೂ ಯಾವ ಸ್ಥಳದವರೆಗೆ ಅದು ತಲುಪಿದೆ ಎ೦ಬುದು ಸ೦ಬ೦ಧಪಟ್ಟ ಇಲಾಖೆಗೆ ಮಾತ್ರ ಮಾಹಿತಿ ದೊರಕಿದೆ.ಅದರೆ ಈ ರೀತಿ ನಾಪತ್ತೆಯಾಗಿರುವ ಘಟನೆ ನಗರದ ಜನರಲ್ಲಿ ಬಹಳ ಭಯದ ವಾತಾವರಣವನ್ನು ಹುಟ್ಟುಹಾಕಿದೆ.
ಹಲವು ವರುಷಗಳ ಹಿ೦ದೆ ಇದೇ ರೀತಿ ಕಾರಿನ ಚಾಲಕನೊಬ್ಬರನ್ನು ಬಾಡಿಗೆಗೆ ಎ೦ದು ಕರೆದುಕೊ೦ಡು ಹೋಗಲಾಗಿತ್ತು.ಆ ಚಾಲಕನ ಪತ್ತೆಯು ಸಹ ಇದುವರೆಗೂ ಆಗಿಲ್ಲ. ನಾಪತ್ತೆಯಾಗಿರುವ ಘಟನೆಯು ಬಹಳ ಯಕ್ಷಪ್ರಶ್ನೆಯಾಗಿಯೇ ಉಳಿಯಿಲ್ಲವೇ ಎ೦ದು ಜನರು ಬೀದಿಬೀದಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.ಎಲ್ಲಿ ಹೋದರು ಹೊಟೇಲ್ ಉದ್ಯಮಿ ಅಜಿತ್ ರಾವ್ ?ಕಾರಣ ನಿಗೂಢ.