ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಮಲ್ಪೆ ಜಿ.ಎಸ್.ಬಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ಸ೦ಭ್ರಮದ ಶ್ರೀ ರಾಮ ನವಮಿ ಮಹೋತ್ಸವ
ಉಡುಪಿ:ಎ.6, ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮಹೋತ್ಸವ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆಯು ಎ.6 ಆದಿತ್ಯವಾರದ೦ದು ಸ೦ಭ್ರಮದಿ೦ದ ಆಚರಿಸಲಾಯಿತು.
ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ , ಕನಕಾಭಿಷೇಕ , ಗಂಗಾಭಿಷೇಕ , ಪಲಾಭಿಷೇಕ , ಹಾಗೂ ಸಾನಿಧ್ಯ ಹವನ ನಡೆಸಲಾಯಿತು.
ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ , ಭಜನಾ ಕಾರ್ಯಕ್ರಮ , ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು.
ಸಂಜೆ ನೂತನ ರಜತ ಪಲ್ಲಕ್ಕಿಯಲ್ಲಿ ಪ್ರಥಮ ಪೇಟೆ ಪಲ್ಲಕ್ಕಿ ಉತ್ಸವವು ಈ ಬಾರಿಯ ಮೆರವಣಿಗೆಯಲ್ಲಿ ವಿಶೇಷ ಸ್ತಬ್ಧ ಚಿತ್ರ , ಕುಣಿತ ಭಜನೆ , ಗೊಂಬೆ ಬಳಗ , ಚಂಡೆವಾದನ , ವಿವಿಧ ವಾದ್ಯಮೇಳ ಜೊತೆಗೆ ವಿಶೇಷ ಆಕರ್ಷಕ ಮೆರವಣಿಗೆ ನೆಡೆಯಿತು.
ರಾತ್ರಿ ; ಶ್ರೀ ಪದ್ಮಾವತಿ ಗೋವಿಂದ ಮಂಟಪದಲ್ಲಿ ಶ್ರೀದೇವರ ವಸಂತಪೂಜೆ , ಅಷ್ಟಾವಧಾನ ಸೇವೆ ಮಹಾಪೂಜೆ , ಪ್ರಸಾದ ವಿತರಣೆ ನೆಡೆಯಿತು.