
ಮಲ್ಪೆ ಜಿ.ಎಸ್.ಬಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ಎ.6 ರ೦ದು ಶ್ರೀ ರಾಮ ನವಮಿ ಮಹೋತ್ಸವದ ಸ೦ಭ್ರಮ
ಉಡುಪಿ:ಎ.3, ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮಹೋತ್ಸವ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆಯು ಎ.6 ಆದಿತ್ಯವಾರ ನೆಡೆಯಲಿದೆ. ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ , ಕನಕಾಭಿಷೇಕ , ಗಂಗಾಭಿಷೇಕ , ಪಲಾಭಿಷೇಕ , ಹಾಗೂ ಸಾನಿಧ್ಯ ಹವನ ನೆಡೆಯಲಿದೆ.
ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ , ಭಜನಾ ಕಾರ್ಯಕ್ರಮ , ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಲಿದೆ.
ಸಂಜೆ ನೂತನ ರಜತ ಪಲ್ಲಕ್ಕಿಯಲ್ಲಿ ಪ್ರಥಮ ಪೇಟೆ ಪಲ್ಲಕ್ಕಿ ಉತ್ಸವವು ಈ ಬಾರಿಯ ಮೆರವಣಿಗೆಯಲ್ಲಿ ವಿಶೇಷ ಸ್ತಬ್ಧ ಚಿತ್ರ , ಕುಣಿತ ಭಜನೆ , ಗೊಂಬೆ ಬಳಗ , ಚಂಡೆವಾದನ , ವಿವಿಧ ವಾದ್ಯಮೇಳ ಜೊತೆಗೆ ವಿಶೇಷ ಆಕರ್ಷಕ ಮೆರವಣಿಗೆ ನೆಡೆಯಲಿದೆ.
ರಾತ್ರಿ ; ಶ್ರೀ ಪದ್ಮಾವತಿ ಗೋವಿಂದ ಮಂಟಪದಲ್ಲಿ ಶ್ರೀದೇವರ ವಸಂತಪೂಜೆ , ಅಷ್ಟಾವಧಾನ ಸೇವೆ ಮಹಾಪೂಜೆ , ಪ್ರಸಾದ ವಿತರಣೆ ನೆಡೆಯಲಿದೆ ಎಂದು ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.