ಉಡುಪಿ:ಮಾರ್ಚ್ 30ಇ೦ದು ಭಾನುವಾರ ದೇಶದಾದ್ಯ೦ತ ಚಾ೦ದ್ರಮಾನ ಯುಗಾದಿ ಸ೦ಭ್ರಮ. ಯುಗಾದಿಯ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಯಿತು.
ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಮಧ್ಯಾಹ್ನದ ಪೂಜೆಯನ್ನು ನಡೆಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಸಮಾಜ ಬಾ೦ಧವರು ಅಪಾರ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.
ಯುಗಾದಿಯ ಸ೦ದರ್ಭದಲ್ಲಿ ವರ್ಷದ ಹಬ್ಬಗಳ ಪಟ್ಟಿಯನ್ನು ಶ್ರೀದೇವರಿಗೆ ಸಮರ್ಪಿಸಿ ಬಿಡುಗಡೆ ಮಾಡಲಾಯಿತು. ಹಾಗೂ ಅರ್ಚಕರಿಗೆ ಅಧಿಕಾರವನ್ನು ಹಸ್ತಾ೦ತರಿಸುವ ಕಾರ್ಯಕ್ರಮವು ಜರಗಿತು. ಭಕ್ತರಿ೦ದ ಶ್ರೀದೇವರಿಗೆ ನೀಡಲಾದ ಬೆಳ್ಳಿಯ ತೂಗು ದೀಪದೊ೦ದಿಗೆ ಅಲ೦ಕಾರ ಮಾಡಲಾಗಿದೆ.