ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಬಿಜೆಪಿಯವರು ಮೋದಿ ಹೆಸರಲ್ಲಿ ಮುಸಲ್ಮಾನರಿಗೆ ಏನಾದರೂ ಕೊಡುಗೆ ನೀಡಿದರೆ ಅದು ಸಹಾಯ:ಬಿಜೆಪಿಯ ನಾಯಕರುಗಳು ಅಧಿಕಾರಕ್ಕಾಗಿ ಮಾಡುತ್ತಿರುವ ಒಂದು ಕುತಂತ್ರ:ಸುರೇಶ್ ಶೆಟ್ಟಿ ಬನ್ನಂಜೆ.
ದೇಶದಲ್ಲಿ ಈ ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ಬಿಜೆಪಿಯವರು ನಮ್ಮ ದೇಶದ ಲಕ್ಷಾಂತರ ಮುಸಲ್ಮಾನರಿಗೆ ಕಿಟ್ ವಿತರಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು ಸ್ವಾಗತ .ಇದು ತಮ್ಮ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ಪಡೆದು ಹಣ ಗಳಿಸಲಿಕ್ಕಾಗಿ ಎಂಬುದು ಇವರ ಈ ನಡೆಯಿಂದ ಸಾಬಿತಾಗಿದೆ.
ಕಾಂಗ್ರೆಸ್ ಪಕ್ಷವು ಮುಸಲ್ಮಾನರಿಗೆ ಏನಾದರೂ ಕೊಡುಗೆಯನ್ನು ನೀಡಿದರೆ ಅದು ಹಿಂದೂ ವಿರೋಧಿ ಎಂಬ ಅಪಪ್ರಚಾರವನ್ನು ಮಾಡಿ ದೇಶದಾದ್ಯಂತ ಪ್ರತಿಭಟನೆಯನ್ನು ಮಾಡುವ ಈ ಕೆಟ್ಟ ಬಿಜೆಪಿ ನಾಯಕರುಗಳಿಗೆ ನಮ್ಮ ದೇಶದ ಜನಸಾಮಾನ್ಯರು ಈ ಬಿಜೆಪಿಯವರ ದ್ವಿಮುಖ ನೀತಿಯನ್ನು ಸಂಪೂರ್ಣವಾಗಿ ವಿರೋಧಿಸಬೇಕಾಗಿದೆ. ಕೇವಲ ತಮ್ಮ ಅಧಿಕಾರದ ಆಸೆಗಾಗಿ ಈ ಬಿಜೆಪಿ ನಾಯಕರುಗಳು ನಮ್ಮ ದೇಶದಾದ್ಯಂತ ಕೋಮು ಗಲಭೆಯನ್ನು ಸೃಷ್ಟಿಸಿ ಅಧಿಕಾರವನ್ನು ಪಡೆದುಕೊಂಡಿರುತ್ತಾರೆ.
ನಮ್ಮ ರಾಜ್ಯದಲ್ಲಿ ಮುಸ್ಲಿಮರಿಗೆ ನಾಲ್ಕು4% ಶೇಖಡ ಗುತ್ತಿಗೆ ಕಾಮಗಾರಿ ಮಾಡಲು ಅವಕಾಶ ನೀಡಿದ್ದಕ್ಕಾಗಿ ರಾಜ್ಯದ ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷವು ಹಿಂದು ವಿರೋಧಿ ಎಂಬಂತೆ ಬಿಂಬಿಸಿರುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಯಾವತ್ತು ಜಾತಿ ಹಾಗೂ ಕೋಮು ರಾಜಕೀಯವನ್ನು ಮಾಡದೆ ಎಲ್ಲರಿಗೂ ಸಮ ಪಾಲು .ಸಮ ಬಾಳು . ಎಂಬ ತತ್ವದ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿದ್ದು ರಾಜ್ಯದ ಜನಸಾಮಾನ್ಯರ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷದ ಮೇಲೆ ಇದ್ದು ಮುಂದಿನ ದಿನಗಳಲ್ಲಿ ತಮಗೆ ಯಾವುದೇ ಅವಕಾಶಗಳು ಸಿಗಲಿಕ್ಕೆ ಇಲ್ಲ ಎಂದು ಅರಿತ ಈ ಬಿಜೆಪಿ ನಾಯಕರುಗಳು ಅನಗತ್ಯವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
ಇವರಿಗೆ ತಕ್ಕ ಪಾಠವನ್ನು ನಮ್ಮ ರಾಜ್ಯದ ಎಲ್ಲಾ ಮತದಾರರು ಜಾತಿಭೇದವನ್ನು ಮರೆತು ಒಗ್ಗಟ್ಟಾಗಿ ಕಲಿಸಬೇಕಾಗಿದೆ. ಮಾತ್ರವಲ್ಲದೆ ನಾವೆಲ್ಲರೂ ಭಾರತೀಯರು ಎಂಬುದನ್ನು ಈ ಬಿಜೆಪಿಯ ನಾಯಕರಿಗೆ ತೋರಿಸಿಕೊಡಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ನಗರಸಭಾ ನಾಮನಿರ್ದೇಶನ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.