ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ: 8ನೇ ನಗರಭಜನೆ ಸ೦ಪನ್ನ…(85pic)

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.

ಕಾರ್ಯಕ್ರಮದ ಅ೦ಗವಾಗಿ 8ನೇ ಭಾನುವಾರವಾದ ಮಾ.23ರ೦ದು ನಗರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 8ನೇ ನಗರ ಭಜನಾ ಕಾರ್ಯಕ್ರಮವು ಕಾಡುಬೆಟ್ಟುವಿನ ಶ್ರೀವಿದ್ಯಾರೆಸಿಡೆನ್ಸಿಯ ಶ್ರೀಟಿ.ಜಯಪ್ರಕಾಶ ಕಿಣಿ ಹಾಗೂ ಶ್ರೀಮತಿ ಆರತಿ ಜೆ
ಕಿಣಿ, ಮಾಸ್ಟರ್ 
ಟಿ. ನೈವೇದ್ಯಕಿಣಿಯವರ ಮನೆಯಲ್ಲಿ ವಿಜೃ೦ಭಣೆಯಿ೦ದ ಜರಗಿತು.

ಮನೆ ಭಜನೆಯೊ೦ದಿಗೆ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಭಾವಚಿತ್ರಕ್ಕೆ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪರಿವಾರ ದೇವರ ಅರ್ಚಕರಾದ ದೀಪಕ್ ಭಟ್ ಹಾಗೂ ಸಹಾಯಕ ಅರ್ಚಕರಾದ ಗಿರೀಶ್ ಭಟ್ ರವರು ಅಲ೦ಕಾರವನ್ನು ಮಾಡಿ
ಆರತಿಯನ್ನು ಬೆಳಗಿದರು.

ಭಜನೆಯ ಉಸ್ತುವಾರಿಯನ್ನು ವಹಿಸಿಕೊ೦ಡಿರುವ ಮಟ್ಟಾರು ಶ್ರೀ ಸತೀಶ್ ಕಿಣಿಯವರು ಹಾಗೂ ಭಜನಾ ತ೦ಡದವರು ಭಜನೆಯನ್ನು ನೆರವೇರಿಸಿಕೊಟ್ಟರು.

ದೇವಸ್ಥಾನದ ಆಡಳಿತ ಮ೦ಡಳಿಯ ಟ್ರಸ್ಟಿಗಳಾದ ಅಲೆವೂರು ಶ್ರೀಗಣೇಶ ಕಿಣಿ,ಮಟ್ಟಾರು ಶ್ರೀವಸ೦ತ ಕಿಣಿ,ಶ್ರೀರೋಹಿತಕ್ಷ ಪಡಿಯಾರ್ ಮತ್ತು ಇತರ ಟ್ರಸ್ಟಿಗಳು ಮತ್ತು ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಸದಸ್ಯರು ಸೇರಿದ೦ತೆ ಸಮಾಜ ಬಾ೦ಧವರು ಹಾಗೂ ವಿಶೇಷ ಆಹ್ವಾನಿತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಬ೦ದ೦ತಹ ಸಮಾಜ ಬಾ೦ಧವರಿಗೆ ಫಲಹಾರವನ್ನು ನೀಡಿಲಾಯಿತು.

ಮನೆ ಭಜನೆಯೊ೦ದಿಗೆ ಭಜನೆಯನ್ನು ನಡೆಸಿದ ಬಳಿಕ ಅವರ ಮನೆಯಿ೦ದ ಅಲ೦ಕಾರ ಚಿತ್ರಮ೦ದಿರದ ಮಾರ್ಗವಾಗಿ, ತ್ರಿವೇಣಿ ಸರ್ಕಲ್, ಸ೦ಸ್ಕೃತ ಕಾಲೇಜು ವೃತ್ತ ಮಾರ್ಗವಾಗಿ,ಕನಕದಾಸ ರಸ್ತೆಮಾರ್ಗವಾಗಿ,ರಥಬೀದಿ ಪ್ರವೇಶಿಸಿ ಕನಕಗೋಪುರ ಹಾಗೂ ಶ್ರೀಕೃಷ್ಣಮಠದ ಮು೦ಭಾಗವಾಗಿ ತೆ೦ಕಪೇಟೆ,ಐಡಿಯಲ್ ಸರ್ಕಲ್ ಮಾರ್ಗವಾಗಿ ಶ್ರೀಶ್ರೀದೇವಳಕ್ಕೆ ತಲುಪಿತು.

ಶ್ರೀದೇವರ ಪ್ರಸಾದವನ್ನು ಶ್ರೀ ಟಿ.ಜಯಪ್ರಕಾಶ್ ಕಿಣಿ ಹಾಗೂ ಮಾಸ್ಟರ್ ಟಿ.ನೈವೇದ್ಯಕಿಣಿಯವರಿಗೆ ಪ್ರಧಾನ ಅರ್ಚಕರಾದ ಶ್ರೀದಯಾಘನ್ ಭಟ್ ರವರು ನೀಡಿದರು.

ಚಿತ್ರಸಹಕಾರ: ಶ್ರೀದೇವದಾಸ್ ಕಾಮತ್ ಕಾಮತ್ ವಿಡಿಯೋ ಉಡುಪಿ.

 

kiniudupi@rediffmail.com

No Comments

Leave A Comment