ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ, ಗೆಳೆಯನಾದರೂ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ಕ್ರಮ ಒಪ್ಪಲ್ಲ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ನಮಗೆ ಭಾರತದೊಂದಿಗೆ ‘ಉತ್ತಮ ಬಾಂಧವ್ಯ’ ಇದೆ, ಆದರೆ, ಆ ದೇಶದೊಂದಿಗೆ ಅವರಿಗೆ ಇರುವ ‘ಏಕೈಕ ಸಮಸ್ಯೆ’ ಎಂದರೆ ‘ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಅಮೆರಿಕದ ಸುದ್ದಿ, ಅಭಿಪ್ರಾಯ ಮತ್ತು ವ್ಯಾಖ್ಯಾನ ವೆಬ್‌ಸೈಟ್ ಬ್ರೈಟ್‌ಬಾರ್ಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಟ್ರಂಪ್ ಅವರು ಭಾರತದೊಂದಿಗಿನ ಅಮೆರಿಕದ ಸಂಬಂಧದ ಕುರಿತು ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಜೊತೆಗಿನ ಇತ್ತೀಚಿನ ಭೇಟಿ ಉಲ್ಲೇಖಿಸಿ ಮಾತನಾಡಿರುವ ಅವರು, ನನಗೆ ಭಾರತದೊಂದಿಗೆ ಉತ್ತಮ ಬಾಂಧವ್ಯವಿದೆ, ಆದರೆ, ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿರುವುದು ನನಗಿರುವ ಸಮಸ್ಯೆಯಾಗಿದೆ ಎಂದು ಹೇಳಿದರು.

ಭಾರತ ಗಣನೀಯವಾಗಿ ಸುಂಕ ತಗ್ಗಿಸಲಿದೆ ಎಂದು ಭಾವಿಸುತ್ತೇನೆ. ಆದರೆ, ಏಪ್ರಿಲ್‌ 2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸುವಷ್ಟೇ ಸುಂಕವನ್ನು ನಾವೂ ವಿಧಿಸಲಿದ್ದೇವೆ ಎಂದು ತಿಳಿಸಿದರು.

ಭಾರತ-ಮಧ್ಯಪ್ರಾಚ್ಯ-ಯುರೋಪ್-ಆರ್ಥಿಕ ಕಾರಿಡಾರ್ (IMEC) ಕುರಿತು ಮಾತನಾಡಿ, ವ್ಯಾಪಾರ-ವಹಿವಾಟಿನಲ್ಲಿ ನಮಗೆ ಹಾನಿ ಮಾಡಲು ಬಯಸುವ ಇತರ ದೇಶಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಬಲ ರಾಷ್ಟ್ರಗಳ ಗುಂಪು ಇದಾಗಿದೆ ಎಂದು ಹೇಳಿದರು.

ಸ್ನೇಹ ರಾಷ್ಟ್ರಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ನಮಗೆ ಇಷ್ಟವಿಲ್ಲ. ಆದರೆ, ಉತ್ತಮ ಗೆಳೆಯನಾದರೂ ಭಾರತದ ಸುಂಕದ ಕ್ರಮ ಒಪ್ಪುವಂತದ್ದಲ್ಲ. ಕೆಲವು ಸಂದರ್ಭಗಳಲ್ಲಿ ನಮಗೆ ಸ್ನೇಹಪರವಾಗಿರದವರು ಸ್ನೇಹಪರವಾಗಿರಬೇಕಾದ ಯುರೋಪಿಯನ್ ಒಕ್ಕೂಟದಂತೆ ನಮ್ಮನ್ನು ವ್ಯಾಪಾರದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಭಾರತ ಮತ್ತು ಇತರೆ ಎಲ್ಲಾ ರಾಷ್ಟ್ರಗಳು ನಮ್ಮನ್ನು ಮಿತ್ರ ರಾಷ್ಟ್ರವೆಂದು ಬಯಸುತ್ತಾರೆ. ನಾನೂ ಇತರರಿರೂ ಅದೇ ರೀತಿ ಹೇಳಬಲ್ಲೆ. ಆದರೆ, ವಿಚಾರದಲ್ಲಿ ಭಾರತವನ್ನು ಒಪ್ಪಲ್ಲ. ಏ.2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕಾ ಭಾರತದ ಉತ್ಪನ್ನಗಳಿಗೂ ಸುಂಕ ವಿಧಿಸುತ್ತದೆ ಎಂದು ಪುನರುಚ್ಛರಿಸಿದ್ದಾರೆ.

ಕಳೆ ದಿನಗಳ ಹಿಂದಷ್ಟೇ ಡೊನಾಲ್ಡ್ ಟ್ರಂಪ್ ಅವರು ಭಾರತದ “ಸುಂಕಗಳ” ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನೀವು ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಅದು ಬಹುತೇಕ ನಿರ್ಬಂಧಿತವಾಗಿದೆ,” ಎಂದು ಹೇಳಿದ್ದರು. ಆದರೆ , ನೆಗೂ ಸುಂಕ ಕಡಿತಕ್ಕೆ ಭಾರತ ಒಪ್ಪಿದ್ದು, ಅವರ ಕೆಲಸ ಬಹಿರಂಗ ಮಾಡುತ್ತಿರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದನ್ನು ಭಾರತ ನಿರಾಕರಿಸಿತ್ತು. ಸರ್ಕಾರ ಈ ರೀತಿಯ ಯಾವುದೇ ನಿರ್ಧಾರವನ್ನು ದೇಶ ತೆಗೆದುಕೊಂಡಿಲ್ಲ. ತೆರಿಗೆ ಕಡಿತ ಮಾಡಿಲ್ಲ ಎಂದು ಪಾರ್ಲಿಮೆಂಟರಿ ಪ್ಯಾನಲ್‌ನಲ್ಲಿ ಹೇಳಿತ್ತು. ಅಲ್ಲದೆ ಸಪ್ಟೆಂಬರ್ ವರೆಗೆ ತೆರಿಗೆ ಪದ್ಧತಿಯ ಕುರಿತು ನಿರ್ಧಾರಕ್ಕೆ ಬರಲು ಸಮಯಾವಕಾಶ ಕೇಳಲಾಗಿದೆ ಎಂದೂ ತಿಳಿಸಿತ್ತು.

ಟ್ರಂಪ್ ಎರಡನೇ ಅವಧಿಯಲ್ಲಿ ಅಮೋರಿಕಾ ಅಧಿಕಾರ ಸ್ವೀಕರಿಸಿದ ಬಳಿಕ, ಜಾಗತಿಕ ವ್ಯವಹಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ನಿರಂತರವಾಗಿ ಭಾರತದ ತೆರಿಗೆ ಪದ್ಧತಿಯ ವಿರುದ್ಧ ಹೇಳಿಕೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಅಲ್ಲದೆ ಸುಂಕ ಕಡಿತಕ್ಕೆ ಒತ್ತಡ ಹೇರುತ್ತಿದ್ದಾರೆ.

ಅಮೆರಿಕದ ಅಧಿಕಾರ ವಹಿಸಿದ ಬಳಿಕ ಮಿತ್ರ ಹಾಗೂ ಶತ್ರು ರಾಷ್ಟ್ರಗಳನ್ನು ಗುರಿಯಾಗಿಸಿ ಅವರ ನೀತಿಗಳು ಬದಲಾಗುತ್ತಿವೆ. ಅಮೆರಿಕದ ಜೊತೆಗೆ ವಾಣಿಜ್ಯ ವಹಿವಾಟಿನಲ್ಲಿರುವ ದೇಶಗಳಿಂದ ಅನ್ಯಾಯದ ವ್ಯಾಪಾರ ಆಗುತ್ತಿದೆ ಎಂದು ಧೂಷಿರುವ ಟ್ರಂಪ್, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಪ್ರತೀಕಾರದ ತೆರಿಗೆಯನ್ನು ಹೇರಲು ಮುಂದಾಗಿದೆ.

No Comments

Leave A Comment