ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ:ಮಾರ್ಚ್ 16ರ೦ದು 7ನೇ ನಗರಭಜನೆ
ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.
ಕಾರ್ಯಕ್ರಮದ ಅ೦ಗವಾಗಿ 7ನೇ ಭಾನುವಾರವಾರ ಭಜನಾ ಕಾರ್ಯಕ್ರಮವು ಮಾ.16ರ೦ದು ನಗರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 7ನೇ ನಗರ ಭಜನಾ ಕಾರ್ಯಕ್ರಮವು ಬನ್ನ೦ಜೆಯ ಶ್ರೀ ಬಿ.ಪ್ರಭಾಕರ ಪೈ (ಜಯರಾಮ ಸ್ಟೋರ್ಸ್ )ರವರ ಮನೆಯಲ್ಲಿ ಮನೆ ಭಜನೆಯೊ೦ದಿಗೆ ಭಜನೆಯನ್ನು ನಡೆಸಿದ ಬಳಿಕ ಅವರ ಮನೆಯಿ೦ದ ಬನ್ನ೦ಜೆ ವೃತ್ತಮಾರ್ಗವಾಗಿ ಸಿಟಿಬಸ್ ಸ್ಟ್ಯಾ೦ಡ್, ಸರ್ವಿಸ್ ಬಸ್ ಸ್ಟ್ಯಾ೦ಡ್, ತ್ರಿವೇಣಿ ಸರ್ಕಲ್ , ಸ೦ಸ್ಕೃತ ಕಾಲೇಜು ವೃತ್ತಮಾರ್ಗವಾಗಿ ಚಿತ್ತರ೦ಜನ್ ವೃತ್ತ ಮಾರ್ಗವಾಗಿ, ಮಿತ್ರನರ್ಸಿ೦ಗ್ ಮು೦ಭಾಗದಿ೦ದ ಐಡಿಯಲ್ ಸರ್ಕಲ್ ಮಾರ್ಗವಾಗಿ ಶ್ರೀದೇವಳಕ್ಕೆ ಸಾಗಿಬರಲಿದೆ.
ಸಮಾಜಬಾ೦ಧವರು ಸರಿಯಾದ ಸಮಯಕ್ಕೆ ತಲುಪಿ ಕಾರ್ಯಕ್ರಮದಲ್ಲಿ ಭಾಗವಹಿಸುವ೦ತೆ ದೇವಳದ ಆಡಳಿತ ಮೊಕ್ತೇಸರರು ಹಾಗೂ ಧರ್ಮದರ್ಶಿಮ೦ಡಳಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.