ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬೆಂಗಳೂರು: ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ
ಬೆಂಗಳೂರು:ಮಾರ್ಚ್ 10: ಕುಂಭಮೇಳ ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ. ಪಾಂಚಜನ್ಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್ರಾಜ್ , ವಾರಣಾಸಿ ಸೇರಿಂದತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದಾನೆ.
ಇದನ್ನು ನಂಬಿದ ಯಾತ್ರಾರ್ಥಿಗಳು ರಾಘವೇಂದ್ರ ರಾವ್ನನ್ನು ಸಂಪರ್ಕಿಸಿದ್ದಾರೆ. ಆಗ, ಆರೋಪಿ ರಾಘವೇಂದ್ರ ರಾವ್, ಏಳು ದಿನಗಳ ಪ್ಯಾಕೇಜ್ಗೆ ತಲಾ 49 ಸಾವಿರ ರೂ. ಪಡೆದಿದ್ದಾನೆ. ಹೀಗೆ, ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ 70 ಲಕ್ಷ ರೂ. ಪಡೆದಿದ್ದಾನೆ. ಬಳಿಕ, ರಾಘವೇಂದ್ರ ರಾವ್ ಎರಡು ರೀತಿ ವಂಚನೆ ಎಸಗಿದ್ದಾನೆ.
ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.
ವಂಚಿಸಿ ಪಡೆದಿದ್ದ ಹಣದಲ್ಲಿ ರಾಘವೇಂದ್ರ ರಾವ್ ಬೆಟ್ಟಿಂಗ್ ಆಡಿ ಸೋತಿದ್ದಾನೆ. ರಾಂಘವೇಂದ್ರ ರಾವ್ ಬೆಟ್ಟಿಂಗ್ ಆ್ಯಪ್ನಲ್ಲಿ ಹಣ ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಗೋವಿಂದರಾಜನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.