ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ವಕೀಲರ ತ೦ಡಕ್ಕೆ ವಾಲಿಬಾಲ್ ಟ್ರೋಫಿ,ಶಿವಮೊಗ್ಗ ವಕೀಲರ ತ೦ಡಕ್ಕೆ ಕ್ರಿಕೆಟ್ ಟ್ರೋಫಿ
ಉಡುಪಿ:ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿಎಮ್ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ ಉಡುಪಿ ವಕೀಲರ ಸ೦ಘದ ತ೦ಡವು ವಾಲಿಬಾಲ್ ಪ೦ದ್ಯಾಟದಲ್ಲಿ ಗೆದ್ದು ಟ್ರೋಫಿಯನ್ನು ತನ್ನಪಾಲಗಿಸಿಕೊ೦ಡಿದೆ. ಅದೇ ರೀತಿಯಲ್ಲಿ ಕ್ರಿಕೆಟ್ ಪ೦ದ್ಯಾಟದಲ್ಲಿ ಶಿವಮೊಗ್ಗ ತ೦ಡವು ಪ೦ದ್ಯಾಟವನ್ನು ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊ೦ಡಿದೆ.